ADVERTISEMENT

ನೈತಿಕತೆ: ಬೇಕಾಗಿದೆ ಸ್ಪಷ್ಟ ವ್ಯಾಖ್ಯಾನ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 19 ಮೇ 2021, 19:30 IST
Last Updated 19 ಮೇ 2021, 19:30 IST

ಮದುವೆಯಾಗದೇ ಒಟ್ಟಿಗೆ ಇರುವುದನ್ನು ಸಾಮಾಜಿಕವಾಗಿ ಹಾಗೂ ನೈತಿಕವಾಗಿ ಒಪ್ಪಲಾಗದು ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಹೇಳಿದೆ (ಪ್ರ.ವಾ., ಮೇ 19) ಒಟ್ಟಾಗಿ ಬದುಕುತ್ತಿರುವ ಯುವ ಜೋಡಿಯೊಂದು ತಮಗೆ ಪೋಷಕರಿಂದ ಅಪಾಯವಿರುವುದರಿಂದ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿತ್ತು. ನೈತಿಕತೆಯ ಆಧಾರದ ಮೇಲೆ ಅವರ ಅರ್ಜಿಯನ್ನು ವಜಾಗೊಳಿಸಿರುವ ಕೋರ್ಟ್‌, ಅವರಿಗೆ ರಕ್ಷಣೆ ನೀಡಲು ನಿರಾಕರಿಸಿದೆ.

ಈ ಜೋಡಿ ನ್ಯಾಯಾಲಯದಿಂದ ಸಹಾಯವನ್ನೇ ಕೋರದಿದ್ದರೆ ನ್ಯಾಯಾಲಯವು ನೈತಿಕತೆಯನ್ನು ಹೇಗೆ ಎತ್ತಿಹಿಡಿಯುತ್ತಿತ್ತು? ಹೀಗೆ ಮದುವೆಯಾಗದೇ ಒಟ್ಟಾಗಿ ಬದುಕುತ್ತಿರುವುದು ಲಾಗಾಯ್ತಿನಿಂದ ನಡೆದುಕೊಂಡು ಬಂದಿದೆಯಲ್ಲವೇ? ಭಾರತದ ಗೊಂಡ್‌ ಮತ್ತು ಮುರಿಯಾ ಬುಡಕಟ್ಟುಗಳಲ್ಲಿ ವಿವಾಹಪೂರ್ವ ಲೈಂಗಿಕತೆಯಷ್ಟೇ ಅಲ್ಲ, ಬೇರೆಬೇರೆ ಸಂಗಾತಿಗಳೊಡನೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುವುದನ್ನೂ ಮಾನ್ಯ ಮಾಡಲಾಗುತ್ತದೆ. ಇದಕ್ಕೆ ನ್ಯಾಯಾಲಯಗಳಲ್ಲಿ ಉತ್ತರವಿದೆಯೇ?

ನೈತಿಕತೆ ಎನ್ನುವುದೇ ವ್ಯಕ್ತಿನಿಷ್ಠವಾಗಿರುವಾಗ ನ್ಯಾಯಾಲಯಗಳು ಅದನ್ನು ಹೇಗೆ ನಿರ್ಧರಿಸುತ್ತವೆ? ಬೇರೆಬೇರೆ ನ್ಯಾಯಾಲಯಗಳು ನೈತಿಕತೆಯನ್ನು ತಮತಮಗೆ ಸರಿಕಂಡಂತೆ ವ್ಯಾಖ್ಯಾನಿಸಿದರೆ, ಸಂವಿಧಾನದ ಕಾನೂನುಗಳಿಗೆ ಏನು ಬೆಲೆ? ನೈತಿಕತೆಗೆ ಸುಪ್ರೀಂ ಕೋರ್ಟ್‌ ಸ್ಪಷ್ಟ ವ್ಯಾಖ್ಯಾನ ನೀಡಬೇಕಾಗಿದೆ.

ADVERTISEMENT

– ನಡಹಳ್ಳಿ ವಸಂತ್‌,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.