ADVERTISEMENT

ದೊಡ್ಡ ಸವಾಲು: ಸಿದ್ಧತೆಯೇ ಜವಾಬು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 20:15 IST
Last Updated 30 ಏಪ್ರಿಲ್ 2020, 20:15 IST

ದೇಶದ ಪ್ರತೀ ಹತ್ತರಲ್ಲಿ ಒಬ್ಬರ ಉದ್ಯೋಗಕ್ಕೆ ಕುತ್ತು ಬರಲಿದೆ ಎಂಬ ವರದಿಯು (ಪ್ರ.ವಾ., ಏ. 29) ಲಾಕ್‌ಡೌನ್‌ ತೆರವಿನ ತರುವಾಯ ಎದುರಿಸಲೇಬೇಕಾದ ದೊಡ್ಡ ಸವಾಲಿನ ಬಗ್ಗೆ ನಮ್ಮನ್ನು ಎಚ್ಚರಿಸಿದೆ. ಮುಖ್ಯವಾಗಿ, ದೊಡ್ಡ ಪ್ರಮಾಣದ ಅಸಂಘಟಿತ ವಲಯದಲ್ಲಿ ತಲೆದೋರುವ ಈ ಸವಾಲನ್ನು ಸ್ವೀಕರಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸರ್ಕಾರದಾದಿಯಾಗಿ ಎಲ್ಲರೂ ಸಿದ್ಧರಾಗಬೇಕಿದೆ. ಅರ್ಥವ್ಯವಸ್ಥೆಯು ಮರಳಿ ಹಳಿಯನ್ನು ತಲುಪುವವರೆಗೆ ಜೀವನೋಪಾಯಕ್ಕಾಗಿ ಯಾವುದಾದರೂ ವೃತ್ತಿಯನ್ನು ಕಂಡುಕೊಳ್ಳಬೇಕಾದ ಚಿಂತನೆಯು ಈಗಿನಿಂದಲೇ ನಡೆದರೆ ಉತ್ತಮ.

ಭವಿಷ್ಯನಿಧಿ ಅಥವಾ ವಿಮೆಯಂತಹ ಯಾವುದೇ ಸುರಕ್ಷಾ ಸೌಲಭ್ಯಗಳಿಲ್ಲದ ಅಸಂಘಟಿತ ವಲಯದ ಕೆಲಸಗಾರರಿಗೆ ಎಲ್ಲಕ್ಕಿಂತ ಮಿಗಿಲಾಗಿ ಉದ್ಯೋಗ ಭದ್ರತೆ ಸರ್ಕಾರದಿಂದ ದೊರೆಯಬೇಕು. ಈ ದಿಸೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಹೆಚ್ಚು ಒತ್ತು ಮತ್ತು ಅನುದಾನ ದೊರಕಿಸಿ
ಕೊಡಬೇಕಾದ ಅನಿವಾರ್ಯ ಹೆಚ್ಚಾಗಿದೆ.

-ದೇವರಾಜ್ ಕೆ.ಎಸ್., ದೊಡ್ಡಕೋಡಿಹಳ್ಳಿ, ಹಾಸನ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.