ADVERTISEMENT

ವಾಚಕರ ವಾಣಿ|ದಂತ ವೈದ್ಯರು– ರೋಗಿಗಳ ಪಾಡೇನು?

​ಪ್ರಜಾವಾಣಿ ವಾರ್ತೆ
Published 17 ಮೇ 2020, 19:06 IST
Last Updated 17 ಮೇ 2020, 19:06 IST

ಎರಡು– ಮೂರು ಹಲ್ಲು ಕೀಳಿಸಿಕೊಂಡವರು ಮುಂದಿನ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ, ಎಲ್ಲಾ ಹಲ್ಲುಗಳನ್ನು ಕೀಳಿಸಿಕೊಂಡು ಕೃತಕ ಹಲ್ಲಿಗಾಗಿ ಕಾಯುತ್ತಿದ್ದ ಬೊಚ್ಚು ಬಾಯಿಯವರಿಗೆ ಮುಖಗವಸು ವರದಾನವಾಗಿದೆ, ಆದರೆ ರೊಟ್ಟಿ ಅಗಿಯಲಾಗುತ್ತಿಲ್ಲ. ವಕ್ರ ಹಲ್ಲಿನವರಿಗೆ ಕ್ಲಿಪ್ ಇಲ್ಲದೆ, ಉಳಿದ ಹಲ್ಲುಗಳೂ ವಕ್ರವಾಗುತ್ತಿವೆ. ಮುಂದೆ ಲಾಕ್‍ಡೌನ್ ತೆರೆದರೂ ದಂತ ವೈದ್ಯರು ಚಿಕಿತ್ಸೆ ಮಾಡುವ ಬಗೆ ಹೇಗೆ? ದಂತ ಚಿಕಿತ್ಸೆಗಾಗಿ ಸರ್ಕಾರ ಯಾವುದಾದರೂ ಅನುಮತಿ ಪತ್ರವನ್ನು ಪ್ರಕಟಿಸಬಹುದೇ? ಕ್ವಾರಂಟೈನ್ ಮುದ್ರೆ ಹಾಕಿದವರಿಗೆ ಚಿಕಿತ್ಸೆ ಮಾಡಬಹುದೇ? ಕ್ವಾರಂಟೈನ್ ಮುದ್ರೆಯ ಕಾಲಾವಧಿ ಎಷ್ಟು ಮುಂತಾದ ಹಲವು ಪ್ರಶ್ನೆಗಳು ಮೂಡುತ್ತವೆ. ಯಾವುದಾದರೂ ಒಂದು ಸೂತ್ರ ಕಂಡುಹಿಡಿಯದಿದ್ದರೆ, ದಂತ ವೈದ್ಯಕೀಯ ರಂಗ ಸಂಕಷ್ಟದಲ್ಲಿ ಬೀಳುವುದು ಖಂಡಿತ.

-ಬಿ.ಎನ್.ಸುರೇಶ್ವರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT