ADVERTISEMENT

ಅನಗತ್ಯ ಕಿರಿಕಿರಿ ತಪ್ಪಬಹುದು

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 19:30 IST
Last Updated 30 ಜೂನ್ 2022, 19:30 IST

ಎಂಟು ದಿನಗಳ ತೀವ್ರ ಗುದ್ದಾಟದಲ್ಲಿ ಕೊನೆಗೂ ಏಕನಾಥ ಶಿಂಧೆ ನೇತೃತ್ವದ ಬಂಡಾಯ ಶಾಸಕರ ತಂಡವು ಮಹಾರಾಷ್ಟ್ರದ ಮಹಾ ವಿಕಾಸ ಆಘಾಡಿ ಸರ್ಕಾರವನ್ನು ಪತನಗೊಳಿಸುವಲ್ಲಿ ಯಶಸ್ವಿಯಾಗಿದೆ. ಮಹಾರಾಷ್ಟ್ರದ ಈಗಿನ ವಿದ್ಯಮಾನಕ್ಕೂ ಕರ್ನಾಟಕದಲ್ಲಿ 2019ರಲ್ಲಿ ನಡೆದ ಪ್ರಹಸನಕ್ಕೂ ಅನೇಕ ಸಾಮ್ಯತೆಗಳಿವೆ. ಅಸಮಾಧಾನಗೊಂಡ ಶಾಸಕರ ಸಂಖ್ಯೆ, ರೆಸಾರ್ಟ್‌ನಲ್ಲಿ ಕಳೆದ ದಿನಗಳು ಬಿಟ್ಟರೆ ಎರಡೂ ರಾಜ್ಯಗಳು ಕಂಡ ಫಲಿತಾಂಶ ಒಂದೇ ರೀತಿಯದ್ದು.

ಇದೀಗ, ಶಿಂಧೆ ಅವರೇ ಚುಕ್ಕಾಣಿ ಹಿಡಿಯಲಿದ್ದಾರೆ. ಕಹಿ ಪ್ರಸಂಗಗಳನ್ನು ಮರೆತು, ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ನಡೆಯಲಿ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್‌ ಆಘಾಡಿ ಅಧಿಕಾರಕ್ಕೆ ಬಂದ ನಂತರ ಬೆಳಗಾವಿ ವಿಷಯದಲ್ಲಿ ಅನಗತ್ಯ ಕಿರಿಕಿರಿ ಹೆಚ್ಚಾಗಿತ್ತು. ಸರ್ಕಾರದಲ್ಲಿ ಈಗ ಬಿಜೆಪಿ ಪಾಲುದಾರ ಪಕ್ಷ ಆಗುವುದರಿಂದ ಈ ಕಿರಿಕಿರಿ ನಿವಾರಣೆ ಆಗಬಹುದು. ಏಕೆಂದರೆ, ಎರಡೂ ಕಡೆ ಅದೇ ಪಕ್ಷ ಆಡಳಿದಲ್ಲಿ ಇರುವುದರಿಂದ ತಕರಾರು ಸಹಜವಾಗಿಯೇ ತಪ್ಪಬಹುದು.

-ಮಣಿಕಂಠ ಪಾ. ಹಿರೇಮಠ,ಚವಡಾಪೂರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.