ADVERTISEMENT

ವೈದ್ಯ ಪ್ರಪಂಚದ ಅಳುಕು– ಹುಳುಕು

ರಾಜಶೇಖರ ಹಾದಿಮನಿ
Published 5 ಡಿಸೆಂಬರ್ 2018, 20:00 IST
Last Updated 5 ಡಿಸೆಂಬರ್ 2018, 20:00 IST

ವಿಜ್ಞಾನ ವಿಶೇಷ ಅಂಕಣದಲ್ಲಿ (ಪ್ರ.ವಾ., ನ. 29) ನಾಗೇಶ ಹೆಗಡೆ ಅವರು ‘ವೈದ್ಯರಂಗದ ನೈತಿಕತೆಯನ್ನು ಪ್ರಶ್ನಿಸುವಾಗ ನಮ್ಮದನ್ನೂ ನಾವು‍ಪ್ರಶ್ನಿಸಬೇಕಲ್ಲ!’ ಎಂದು ಅರ್ಥವತ್ತಾಗಿ ಕೇಳಿದ್ದಾರೆ. ಹೌದು, ನಮ್ಮ ಸುತ್ತಲೂ ಪರಿಸರ ಪರಿಶುದ್ಧವಾಗಿಲ್ಲ. ಬರೀ ವೈದ್ಯರ ಮೇಲೆ ಅಪವಾದ ಹೊರಿಸಿದರೆ ಹೇಗೆ? ವೈದ್ಯಕೀಯ ಪ್ರಪಂಚದಲ್ಲಿ ನಮ್ಮ ರಾಜಕೀಯ ರಂಗದ ಕೂಳುಬಾಕರ ಅಕ್ರಮ ಪ್ರವೇಶ ಸಲ್ಲ

ಅಧಿಕಾರಕ್ಕಾಗಿ ಈ ಕಳ್ಳರಾಜಕಾರಣಿಗಳು ವೈದ್ಯಕೀಯ ರಂಗದ ನೈತಿಕತೆಯನ್ನೇ ಅಲ್ಲಾಡಿಸುತ್ತಾರೆ. ‘ಮೂವತ್ತು ರೂಪಾಯಿ ಮೌಲ್ಯದ ಔಷಧವನ್ನು ಮೂವತ್ತು ಸಾವಿರ ರೂಪಾಯಿಗೆ ಮಾರುವ ಕಂಪನಿ ಷೇರು ಖರೀದಿಸಲು ನಮ್ಮ ಜನ ಮುಗಿ ಬೀಳುತ್ತಾರೆ’. ಇಂಥ ಖದೀಮರಿಂದಲೇ ಬಡ ರೋಗಿಗಳು ತತ್ತರಿಸಿ ಹೋಗಿದ್ದಾರೆ, ಅನೇಕ ಖಾಸಗಿ ನರ್ಸಿಂಗ್ ಹೋಂಗಳು ಮಿರಿ ಮಿರಿ ಮಿಂಚುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT