ADVERTISEMENT

ಸ್ಮಾರಕಗಳನ್ನು ಸಂರಕ್ಷಿಸೋಣ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 17:46 IST
Last Updated 23 ನವೆಂಬರ್ 2020, 17:46 IST

ಜಗತ್ಪ್ರಸಿದ್ಧ ಹಂಪಿಯ ಸಂರಕ್ಷಿತ ಸ್ಮಾರಕದೊಳಗೆ ವಿವಾಹಪೂರ್ವ ಫೋಟೊ ಶೂಟ್ ನಡೆಸಿರುವುದನ್ನು ತಿಳಿದು (ಪ್ರ.ವಾ., ನ. 23) ತುಂಬಾ ಬೇಸರವಾಯಿತು. ಫೋಟೊಗ್ರಾಫರ್‌ನ ನಿರ್ದೇಶನದಂತೆ ವಿವಿಧ ಭಂಗಿಗಳಲ್ಲಿ ಶೂಟ್ ಮಾಡಲು ಬಹಳಷ್ಟು ಸಮಯ ಹಿಡಿಯುತ್ತದೆ.

ಸ್ಮಾರಕಗಳ ಒಳಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದ್ದರೂ ಲೀಲಾಜಾಲವಾಗಿ ಓಡಾಡಿ ಫೋಟೊ ಶೂಟ್ ಮಾಡಲಾಗಿದೆ. ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಈ ಕೃತ್ಯ ನಡೆದಿದೆ. ಏನೇ ಆಗಲಿ, ಜವಾಬ್ದಾರಿಯುತವಾಗಿ ತನಿಖೆ ಕೈಗೊಂಡು ತಪ್ಪಿತಸ್ಥರನ್ನು ಶಿಕ್ಷಿಸುವ ಕಾರ್ಯ ಅತ್ಯಂತ ಅವಶ್ಯಕವಾಗಿ ಆಗಬೇಕು.
-ಕೆ.ಪ್ರಭಾಕರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT