ADVERTISEMENT

ಇವರು ಜನಸೇವಕರು, ಹೌದಲ್ಲವೇ?

ರಾಜಶೇಖರ ಹಾದಿಮನಿ
Published 26 ಡಿಸೆಂಬರ್ 2018, 19:59 IST
Last Updated 26 ಡಿಸೆಂಬರ್ 2018, 19:59 IST

ಸಂಸದರು, ಶಾಸಕರು ಯಾವ ಪಕ್ಷದವರೇ ಆಗಿರಲಿ, ಸರ್ಕಾರವು ಪ್ರತೀ ಕ್ಷೇತ್ರದ ಅಭಿವೃದ್ಧಿಗೆಂದು ಹಲವು ಕೋಟಿ ರೂಪಾಯಿ ಅನುದಾನ ನೀಡುತ್ತದೆ. ಅನೇಕ ಜನಪ್ರತಿನಿಧಿಗಳು ಈ ಹಣವನ್ನು ಸರಿಯಾಗಿ ಬಳಸದ ಕಾರಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಈ ಹಣ ಕೊಳೆಯುತ್ತಿದೆ ಎಂದು ಈಚೆಗೆ ವರದಿಯಾಗಿದೆ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಬೊಬ್ಬೆ ಹೊಡೆಯುವವರಿಗೆ, ಕೊಟ್ಟ ಹಣವನ್ನು ಬಳಸಿಕೊಳ್ಳಲು ಆಸಕ್ತಿ ಏಕಿಲ್ಲ ಎಂಬುದು ಅರ್ಥವಾಗದ ವಿಚಾರ.

ಪರಿಸ್ಥಿತಿ ಹೀಗಿದ್ದರೂ ‘ಕ್ಷೇತ್ರಾಭಿವೃದ್ಧಿ ನಿಧಿಯ ಮೊತ್ತವನ್ನು ಹೆಚ್ಚಿಸಬೇಕು’ ಎಂದು ಕೆಲವು ಜನಪ್ರತಿನಿಧಿಗಳು ಕೋರಿರುವುದು ವರದಿಯಾಗಿದೆ. ನಮ್ಮ ಮುಖ್ಯಮಂತ್ರಿ ಈ ಬೇಡಿಕೆಗೆ ಕಿಮ್ಮತ್ತು ಕೊಡಬಾರದು. ಜನರ ತೆರಿಗೆಯ ಹಣ ಪೋಲಾಗದಂತೆ ಎಚ್ಚರಿಕೆ ವಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT