ADVERTISEMENT

ಗ್ರಾಮವಾರು ಮತ: ಗುಪ್ತವಾಗೇ ಇರಲಿ

ಶಿವಕುಮಾರ್  ಯರಗಟ್ಟಿಹಳ್ಳಿ  ಚನ್ನಗಿರಿ
Published 24 ಫೆಬ್ರುವರಿ 2019, 20:15 IST
Last Updated 24 ಫೆಬ್ರುವರಿ 2019, 20:15 IST

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಕೆ.ಸಾಲುಂಡಿ ಗ್ರಾಮದಲ್ಲಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹಾಗೂಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ (ಪ್ರ.ವಾ., ಫೆ.22). ಇದು ಅದೊಂದೇ ಗ್ರಾಮದ ಸಮಸ್ಯೆಯಲ್ಲ, ಬಹುತೇಕ ಗ್ರಾಮಗಳ ಸಮಸ್ಯೆ ಕೂಡ ಹೌದು.

ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಗ್ರಾಮವಾರು ಎಷ್ಟು ಮತ ಪಡೆದಿದ್ದಾರೆ ಎಂಬುದನ್ನು ಚುನಾವಣಾ ಆಯೋಗ ಹಲವು ವರ್ಷಗಳಿಂದ ಬಹಿರಂಗಪಡಿಸುತ್ತಿದೆ. ಗೆದ್ದ ಅಭ್ಯರ್ಥಿಯು ತನಗೆ ಆ ಗ್ರಾಮ ಅಥವಾ ವಾರ್ಡ್‌ನಿಂದ ಕಡಿಮೆ ಮತಗಳು ಬಂದಿದ್ದರೆ, ಆ ಕಾರಣಕ್ಕೆ ಅವುಗಳನ್ನು ನಿರ್ಲಕ್ಷಿಸಿದರೆ ಅದರಿಂದ ಅಭಿವೃದ್ಧಿ ಕುಂಠಿತವಾಗುವುದಲ್ಲವೇ? ಜಾತಿಯಾಧಾರಿತ ದ್ವೇಷ, ಮತ್ಸರಕ್ಕೂ ಕಾರಣವಾಗಬಹುದು. ಆದ್ದರಿಂದ ಆಯೋಗ ಈ ಸೂಕ್ಷ್ಮ ಸಮಸ್ಯೆಯನ್ನು ಅರಿತು, ಕಾನೂನಿಗೆ ತಿದ್ದುಪಡಿ ತರಲಿ. ಇಲ್ಲವಾದಲ್ಲಿ ಗುಪ್ತ ಮತದಾನಕ್ಕೆ ಬೆಲೆ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT