ADVERTISEMENT

ಹೊಸ ವಸ್ತ್ರ ಸಂಹಿತೆ: ಮಾದರಿ ನಡೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 19:31 IST
Last Updated 1 ಜನವರಿ 2021, 19:31 IST

ಮೈಸೂರು ವಿಶ್ವವಿದ್ಯಾಲಯವು ಘಟಿಕೋತ್ಸವದ ವಸ್ತ್ರವನ್ನು (ಗೌನ್) ಬದಲಿಸಿ, ಭಾರತೀಯ ಸಂಸ್ಕೃತಿಗೆ ಸಂವಾದಿಯಾದ ವಸ್ತ್ರಸಂಹಿತೆಯನ್ನು ಜಾರಿಗೆ ತರಲು ಮುಂದಾಗಿರುವುದು ಮಾದರಿ ನಡೆ. ಭಾರತದಲ್ಲಿ ಈ ಹಿಂದೆ ಗುರುಕುಲಗಳಲ್ಲಿ ಶುದ್ಧ ದೇಶಿ ಚಿಂತನೆ, ದೇಶೀಯ ದಿನಚರಿ, ಆಹಾರ, ವಿಹಾರಕ್ಕೆ ಆದ್ಯತೆ ಇರುತ್ತಿತ್ತು. ಗುರುಕುಲಗಳ ಸಮೂಹಗಳು ಸೇರಿ ನಳಂದ, ತಕ್ಷಶಿಲಾ, ವಿಕ್ರಮಶಿಲಾ, ಉಜ್ಜಯಿನಿ ಮೊದಲಾದ ವಿಶ್ವವಿದ್ಯಾಲಯಗಳು ತಲೆಎತ್ತಿ ವಿಶ್ವವಿಖ್ಯಾತವಾಗಿದ್ದವು. ಕಾಲಕ್ರಮೇಣ ಬ್ರಿಟಿಷ್ ಆಚರಣೆಯ ಹೇರಿಕೆ, ಅಂಧಾನುಕರಣೆ ಅವ್ಯಾಹತವಾಗಿ ನಡೆದವು. ಉರಿಬೇಸಿಗೆಯಲ್ಲೂ ಸೂಟು, ಬೂಟು, ಟೈಗಳು ಹೆಮ್ಮೆ ಎನಿಸಿದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ವದೇಶಿ ಚಿಂತನೆಯ ಬಗ್ಗೆ ತರುಣರಲ್ಲಿ ಆಸಕ್ತಿ ಮೂಡುತ್ತಿರುವುದು ಸಂತಸದ ವಿಚಾರ.

–ಟಿ.ಪಿ.ಸುಭಾಷಿಣಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT