ADVERTISEMENT

ವಾಚಕರ ವಾಣಿ: ವಿಶ್ವವಿದ್ಯಾಲಯಗಳ ಸುಧಾರಣೆಗೆ ಕ್ರಮ ಅಗತ್ಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 20:24 IST
Last Updated 25 ಅಕ್ಟೋಬರ್ 2021, 20:24 IST

ವಿಶ್ವವಿದ್ಯಾಲಯಗಳಲ್ಲಿನ ಗಂಭೀರ ಸಮಸ್ಯೆಗಳನ್ನು ಕುರಿತ ‘ಪ್ರಜಾವಾಣಿ’ಯ ವರದಿಗಳು ಸಕಾಲಿಕವೂ ಅರ್ಥಪೂರ್ಣವೂ ಆಗಿವೆ. ಪ್ರಸ್ತುತ ಜಾತಿಯ ಆಲಯಗಳಾಗಿರುವ ಹಲವು ವಿಶ್ವವಿದ್ಯಾಲಯಗಳು ಜ್ಞಾನ ಉತ್ಪಾದನೆಯನ್ನು ಮರೆತಂತೆ ವರ್ತಿಸುತ್ತಿವೆ.

ಬಹುಪಾಲು ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಗಳು ಹಣ, ಜಾತಿ, ಪ್ರಭಾವಗಳ ಹಿನ್ನೆಲೆಯಲ್ಲಿಯೇ ನಡೆಯುತ್ತಿವೆ. ದೇಶದ ಪ್ರಗತಿಯು ಶಿಕ್ಷಣದ ಪ್ರಗತಿಯನ್ನೂ ಆಧರಿಸಿದೆ. ಆದ್ದರಿಂದ ವಿಶ್ವವಿದ್ಯಾಲಯಗಳ ಸುಧಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.

-ಹಂ.ಗು.ರಾಜೇಶ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.