ADVERTISEMENT

ವಾಚಕರ ವಾಣಿ: ಸಮಸ್ಯೆ ಇನ್ನೂ ಮುಗಿದಿಲ್ಲ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 19:31 IST
Last Updated 25 ಸೆಪ್ಟೆಂಬರ್ 2020, 19:31 IST

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಕೊನೆಗೂ ಸರ್ಕಾರ ಸ್ವಲ್ಪ ಮಟ್ಟಿಗೆ ಔದಾರ್ಯ ತೋರಿ, ಆಗಸ್ಟ್‌ವರೆಗೆ ವೇತನ ನೀಡಲು ಒಪ್ಪಿಕೊಂಡಿದೆ. ಆದರೆ ಸಮಸ್ಯೆ ಇಷ್ಟಕ್ಕೇ ಪರಿಹಾರವಾಗುವುದಿಲ್ಲ. ಎಷ್ಟೋ ಮಂದಿ ಅತಿಥಿ ಉಪನ್ಯಾಸಕರು ಕೆಲವು ಕಾಯಂ ಪ್ರಾಧ್ಯಾಪಕರಿಗಿಂತ ಹೆಚ್ಚಿನ ಯೋಗ್ಯತೆ, ವಿದ್ಯಾರ್ಹತೆ, ಸಾಮರ್ಥ್ಯ ಹೊಂದಿದ್ದರೂ ಕನಿಷ್ಠ ವೇತನದೊಂದಿಗೆ ಪ್ರತಿದಿನ ಶೋಷಣೆ, ಆರ್ಥಿಕ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಕೆಲವರ ವಯಸ್ಸೂ ಮೀರುತ್ತಿದೆ. ಅಂತಹವರಿಗೆ ಏನಾದರೂ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.

–ರಾಜಶೇಖರ ಮೂರ್ತಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT