ADVERTISEMENT

ಪುಸ್ತಕೋದ್ಯಮಕ್ಕೆ ತೆರಿಗೆ: ಸರಳೀಕರಣ ಬೇಡ ಪುಸ್ತಕೋದ್ಯಮಕ್ಕೆ ಜಿಎಸ್‌ಟಿ ಬೇಡ ಎಂದು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 19:30 IST
Last Updated 5 ಸೆಪ್ಟೆಂಬರ್ 2021, 19:30 IST

ಪುಸ್ತಕೋದ್ಯಮಕ್ಕೆ ಜಿಎಸ್‌ಟಿ ಬೇಡ ಎಂದು ಮನು ಬಳಿಗಾರ ಅಭಿಪ್ರಾಯಪಟ್ಟಿದ್ದಾರೆ (ಪ್ರ.ವಾ., ಸೆ. 3). ಪ್ರಕಾಶನ ಒಂದು ಉದ್ಯಮ. ಅದಕ್ಕೆ ತೆರಿಗೆ ವಿಧಿಸುವುದರಲ್ಲಿ ತರ್ಕ ಇದೆ. ಲೇಖನವನ್ನೇ ಜೀವನೋಪಾಯ
ಮಾಡಿಕೊಂಡಿರುವವರು ವಿರಳ. ಹಿಂದೆ ಯು.ಆರ್. ಅನಂತಮೂರ್ತಿ, ಈಗ ಎಸ್‌.ಎಲ್. ಭೈರಪ್ಪನವರು ಗಣನೀಯ ಪ್ರಮಾಣದಲ್ಲಿ ಗೌರವಧನ ಪಡೆದಿರಬಹುದು. ಅದಕ್ಕೆ ಜಿಎಸ್‌ಟಿ ಇದೆ (ಶೇ 12, ಇದನ್ನು ಪ್ರಕಾಶಕರು ಭರಿಸುತ್ತಾರೆ). ಪುಸ್ತಕ ಮುದ್ರಣವೂ ಒಂದು ಉದ್ಯಮ- ಕಂಟೆಂಟ್ ಅನ್ನು ಪಬ್ಲಿಷರ್ ಕೊಟ್ಟಾಗ, ಕಾಗದ ಇತ್ಯಾದಿಗಳನ್ನು ಪ್ರಿಂಟರ್ ಒದಗಿಸಿದಾಗ ಶೇ 18ರಷ್ಟು ತೆರಿಗೆ ಇದೆ (ಅನ್‌ಕೋಟೆಡ್ ಪೇಪರ್‌ಗೆ ಶೇ 12). ಓದುಗನಿಗೆ ಮುದ್ರಿತ ಪುಸ್ತಕ ಕೊಂಡಾಗ ತೆರಿಗೆ ಹೊರೆ ಇಲ್ಲ. ಆದರೆ ಬೇರೆ ಮುದ್ರಿತ ಸಾಮಗ್ರಿಗೆ (brochure, leaflet) ಶೇ 5ರಷ್ಟು ಜಿಎಸ್‌ಟಿ ಇದೆ. ಈಗ ಟರ್ನ್ ಓವರ್ (ವಹಿವಾಟು) ಮೊತ್ತಗಳನ್ನು ಗಮನಾರ್ಹವಾಗಿ ಹೆಚ್ಚಿಸಿರುವುದರಿಂದ ಪುಸ್ತಕೋದ್ಯಮಕ್ಕೆ ಸಂಬಂಧಿಸಿದ ಸಂಸ್ಥೆಗಳೂ ಅದರ ಲಾಭ ಪಡೆಯುತ್ತಿರಬಹುದು.

ಒಟ್ಟಾರೆ ‘ಪ್ರಕಾಶಕರು, ಲೇಖಕರ ಮೇಲೆ ಹೊರೆ’ ಎಂದು ಸರಳೀಕರಿಸುವುದು ಸರಿಯಲ್ಲ. ಸಣ್ಣ ಪ್ರಕಾಶಕರು, ಖ್ಯಾತರಲ್ಲದ ಲೇಖಕರು, ಉತ್ತಮ ಹಸ್ತಪ್ರತಿ ಇದ್ದರೂ ಪ್ರಕಾಶಕರು ಸಿಗದೆ ತಮ್ಮ ಖರ್ಚಿನಲ್ಲಿ ಮುದ್ರಿಸಿ ಮಾರಾಟಕ್ಕಾಗಿ ಒದ್ದಾಡುವ ಲೇಖಕರು ಇದ್ದಾರೆ. ಪ್ರಕಾಶಕರ ಸಂಘ ಈ ಬಗೆಗೆ ಏನು ಮಾಡುತ್ತಿದೆ? ಸಗಟು ಖರೀದಿ, ಕೆಲವು ಅನುಕೂಲಸ್ಥ ಬರಹಗಾರರನ್ನೇ ಪ್ರೋತ್ಸಾಹಿಸುವುದು, ಪರಸ್ಪರ ಪ್ರಶಸ್ತಿ ನೀಡಿಕೆ- ಇವೇ ಮುಖ್ಯ ಆದಂತಿದೆ.
ಸಣ್ಣವರೂ ಈ ಕೊರೊನಾ ಕಾಲದಲ್ಲಿ ಬದುಕಿಕೊಳ್ಳಲು ಸರ್ಕಾರಗಳು ಕೆಲವು ತೆರಿಗೆ ಕಡಿತ ಮಾಡುವುದು ಉಚಿತ, ಎಲ್ಲರಿಗೂ ಮಾಫಿ ಮಾಡುವ ಅಗತ್ಯ ಇಲ್ಲ.

-ಎಚ್.ಎಸ್.ಮಂಜುನಾಥ,ಗೌರಿಬಿದನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.