ADVERTISEMENT

ಪರಿಣಾಮಕಾರಿ ಕಲಿಕೆ ಸಾಧ್ಯ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 19:45 IST
Last Updated 23 ನವೆಂಬರ್ 2020, 19:45 IST

ಮೈಸೂರಿನ ಕನ್ನಡ ಶಾಲೆಯೊಂದರಲ್ಲಿ ‘ಮನೆಯಲ್ಲೇ ಓದು’ ಮತ್ತು ‘ತೆರೆದ ಪುಸ್ತಕ ಪರೀಕ್ಷೆ’ಯನ್ನು ಜಾರಿಗೆ ತಂದಿರುವುದು (ಸಂಗತ, ನ. 23) ನಿಜಕ್ಕೂ ಅದ್ಭುತ! ಕೋವಿಡ್‌ನಂತಹ ವಿಷಮ ಸನ್ನಿವೇಶದಲ್ಲಿ ಶಾಲೆಗೆ ಹೋಗಿ ಪಾಠ ಕೇಳಲಾಗದ ಪರಿಸ್ಥಿತಿ ಇರುವಾಗ, ಇರುವುದರಲ್ಲೇ ಇದು ಅತ್ಯುತ್ತಮ ಮಾರ್ಗ ಎನಿಸುತ್ತದೆ.

ತೆರೆದ ಪುಸ್ತಕ ಪರೀಕ್ಷೆಯಾದರೂ ಪ್ರಶ್ನೆಗೆ ಉತ್ತರ ಹುಡುಕುವುದಕ್ಕಾಗಿ ಪಾಠ ಓದುವುದರಿಂದ ವಿಷಯದ ಆಳಕ್ಕಿಳಿಯಲು ಸಹಕಾರಿ‌. ಶಿಕ್ಷಕರು ಬರೆಸಿದ್ದನ್ನು ಉರು ಹೊಡೆದು ಬರೆಯುವುದಕ್ಕಿಂತ ಇದು ಎಷ್ಟೋ ಮೇಲು‌.

ಎಲ್ಲರ ಬಳಿಯೂ ಸ್ಮಾರ್ಟ್ ಫೋನ್ ಇಲ್ಲದಿರಬಹುದು. ಆದರೆ ಒಂದು ಹೊತ್ತಿನ ಊಟವಿಲ್ಲದ ಮನೆಯಲ್ಲೂ ಮೊಬೈಲ್ ಇರುತ್ತದೆ. ಈಗಲೂ ಶಾಲೆ ತೆರೆಯಬೇಕೋ ಬೇಡವೋ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂತಹ ಆನ್‌ಲೈನ್, ಆಫ್‌ಲೈನ್ ತರಗತಿಗಳ ಮುಖಾಂತರ ಪರಿಣಾಮಕಾರಿ ಕಲಿಕೆ ಸಾಧ್ಯವಾಗಿಸಬಹುದು.
-ವಿಶಾಲಾಕ್ಷಿ ಶರ್ಮಾ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.