ADVERTISEMENT

ಸಂಗಾತಿ ಆಯ್ಕೆಯ ಸ್ವಾತಂತ್ರ್ಯ ನೀಡಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 19:39 IST
Last Updated 23 ಜುಲೈ 2019, 19:39 IST

ದೇಶದಲ್ಲಿ ಮರ್ಯಾದೆಗೇಡು ಹತ್ಯೆಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ. ಮಗಳು ಬೇರೆ ಜಾತಿಯವನ ಜೊತೆ ಓಡಿಹೋಗಿ ಮದುವೆಯಾಗಿದ್ದಾಳೆ ಎಂದರೆ ಸಾಕು, ಹಳ್ಳಿಗಳಲ್ಲಂತೂ ಎಲ್ಲರ ಬಾಯಿಯಲ್ಲೂ ಅದೇ ಸುದ್ದಿ ಕೇಳಿಬರುತ್ತದೆ.

ಇದರಿಂದ ರೋಷಾವೇಶಗೊಳ್ಳುವ ಆಕೆಯ ಮನೆಯವರು, ಸ್ವತಃ ಮಗಳು, ಅಳಿಯನನ್ನು ಕೊಲ್ಲಿಸು ವುದಕ್ಕೂ ಹೇಸುವುದಿಲ್ಲ. ಪ್ರಾಪ್ತ ವಯಸ್ಕರು ಪರಸ್ಪರ ಪ್ರೀತಿಸಲು ಪೋಷಕರು ಬಿಡಬೇಕು.

ಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ಕೊಡಬೇಕು. ಆದರೆ ಈ ಮಂದಿಗೆ ಮಕ್ಕಳ ಭಾವನೆಗಿಂತ ಜಾತಿಯೇ ಮುಖ್ಯ ಆಗಿದೆ. ಸಮಾಜದಲ್ಲಿ ಜಾತಿ ವ್ಯವಸ್ಧೆ ತೊಲಗಬೇಕೆಂದರೆ, ಸರ್ಕಾರವು ಜಾತಿಯನ್ನು ಆಧರಿಸಿ ಸೌಲಭ್ಯಗಳನ್ನು ನೀಡುವುದನ್ನು ಬಿಡಬೇಕು. ಆರ್ಥಿಕ ಸ್ಥಿತಿಗತಿ ನೋಡಿ ಸೌಲಭ್ಯಗಳು ಹಂಚಿಕೆಯಾಗಬೇಕು.

ADVERTISEMENT

- ಮಲ್ಲಿಕಾರ್ಜುನ ಕುರಹಟ್ಟಿ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.