ADVERTISEMENT

ಆರನೇ ವೇತನ ಆಯೋಗದ ಹಳೆಯ ಬಾಕಿ ಪಾವತಿಸಲಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2018, 19:30 IST
Last Updated 24 ಆಗಸ್ಟ್ 2018, 19:30 IST

‘ಯುಜಿಸಿಯ ಏಳನೆಯ ವೇತನ ಆಯೋಗದ ಶಿಫಾರಸನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು’ (ವಾ.ವಾ., ಆ. 16) ಎಂದು ಡಾ. ಡಿ.ಎಸ್. ಚೌಗಲೆ ಅವರು ಆಗ್ರಹಿಸಿದ್ದಾರೆ. ಸಂತೋಷ, ಆದರೆ ಆರನೇ ವೇತನ ಆಯೋಗದ (2006 ರಿಂದ 2016ರ ನಡುವಿನದು) ಬಾಕಿ ಹಣವೇ ಇನ್ನೂ ಪೂರ್ಣವಾಗಿ ಸಂದಾಯವಾಗಿಲ್ಲ. ಈ ಅವಧಿಯಲ್ಲಿ ಕೆಲಸ ಮಾಡಿ ನಿವೃತ್ತರಾದ ನೂರಾರು ಪ್ರಾಧ್ಯಾಪಕರು, ಉಳಿದಿರುವ ಕೊನೆಯ ಕಂತಿನ ಈ ಬಾಕಿ ಹಣಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ರಾಜ್ಯ ಸರ್ಕಾರ ಇತ್ತ ಗಮನಹರಿಸಿ ಬಾಕಿ ವೇತನವನ್ನು ಸಂದಾಯ ಮಾಡಲಿ.

–ಡಾ. ಕೆ. ರಮೇಶ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT