ಮಳೆ ಇಲ್ಲದೆ ಕಲಬುರ್ಗಿ ಜಿಲ್ಲೆಯ ಜನರು ದಿಕ್ಕೆಟ್ಟು ಕೂತಿದ್ದಾರೆ. ರಸ್ತೆ ಬದಿಗಿದ್ದ ನೂರಾರು ವರ್ಷ ಹಳೆಯ ಮರಗಳನ್ನು ಅಭಿವೃದ್ಧಿಯ ನೆಪದಲ್ಲಿ ಮುಲಾಜಿಲ್ಲದೆ ಕಡಿಯಲಾಗುತ್ತಿದೆ. ಹುಬ್ಬಳ್ಳಿ– ಧಾರವಾಡ ನಡುವಿನರಸ್ತೆಯು ಯುಜಿಡಿ, ಬಿಆರ್‌ಟಿಎಸ್ ಕಾಮಗಾರಿಯಿಂದಾಗಿ ಹದಗೆಟ್ಟು ಹೋಗಿದೆ. ಕುಡಿಯುವ ನೀರು ಒದಗಿಸದ ಜಲಮಂಡಳಿಯನ್ನು ಜನ ಶಪಿಸುತ್ತಿದ್ದಾರೆ. ರಾಜಕಾರಣಿಗಳು ತಮ್ಮ ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುವುದನ್ನೇ ಕಾಯುತ್ತಿದ್ದಾರೆ.
ಜನರು ಪ್ರತಿದಿನ ಬ್ಯಾಂಕುಗಳಲ್ಲಿ ಪಾಳಿ ಹಚ್ಚಿ ನಿಲ್ಲೋದು ಮಾಮೂಲಾಗಿದೆ. ಹೊಟ್ಟೆಗೆ ತಣ್ಣೀರಿನ ಬಟ್ಟೆ ಕಟ್ಟಿಕೊಳ್ಳುತ್ತಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ತಾರಕಕ್ಕೇರಿದೆ. ಹೆಜ್ಜೆ ಹೆಜ್ಜೆಗೆ ಒತ್ತಡ. ಪೊಲೀಸ್ ಠಾಣೆ, ಕೋರ್ಟು, ಜೈಲು, ಆಸ್ಪತ್ರೆಗಳ ಸಂಖ್ಯೆ ಹೆಚ್ಚಾದಂತೆ ಆಳರಸರ ಸಂಖ್ಯೆಯೂ ಏರುತ್ತಿದೆ. ಕಂಬಳಿಯಲ್ಲಿ ಕಲ್ಲು ಕಟ್ಟಿ ಬಡವರ ಬದುಕಿಗೆ ಹೊಡೆತ ಹಾಕುತ್ತಿದ್ದಾರೆ. ಒಟ್ಟಾರೆ, ಜೆ.ಪಿ. ಮಾದರಿಯ ‘ಸಂಪೂರ್ಣ ಕ್ರಾಂತಿ’ ಈಗ ಮಂತ್ರಿಗಳ ಬುಡಕ್ಕೇ ಬರುತ್ತಲಿದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.