ADVERTISEMENT

ಪ್ಲಾಸ್ಟಿಕ್ ವಸ್ತು ತಯಾರಿಕೆ ಸ್ಥಗಿತಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 21 ಮೇ 2019, 19:42 IST
Last Updated 21 ಮೇ 2019, 19:42 IST

ನಿರುಪಯುಕ್ತ ಪ್ಲಾಸ್ಟಿಕ್ ಅನ್ನು ಸಿಕ್ಕಸಿಕ್ಕಲ್ಲಿ ಬಿಸಾಕುವುದರಿಂದ ಎಲ್ಲೆಡೆ ವಿಲೇವಾರಿಯ ವ್ಯವಸ್ಥೆ ಹದಗೆಟ್ಟಿದೆ. ಇದು ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗಿದೆ.ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ, ಗಗನಚುಂಬಿ ಕಟ್ಟಡಗಳು ಘನತ್ಯಾಜ್ಯ ವಸ್ತುಗಳ ಹೆಚ್ಚಳಕ್ಕೆ ಮುಖ್ಯ ಕಾರಣಗಳಾಗಿದ್ದು, ಇವುಗಳ ವಿಲೇವಾರಿ ಅತಿ ದೊಡ್ಡ ಸವಾಲಾಗಿದೆ.

ನಾಗರಿಕರು ಎನಿಸಿಕೊಂಡಿರುವ ನಾವು ದಶಕಗಳಿಂದಲೂ ಭೂಮಿಯನ್ನು ಅಪವಿತ್ರಗೊಳಿಸುತ್ತಲೇ ಬಂದಿದ್ದೇವೆ. ಇದರ ಪರಿಣಾಮವಾಗಿ ಪರಿಸರ ಮಾಲಿನ್ಯದ ಸುಳಿಗೆ ಸಿಲುಕಿದ್ದೇವೆ. ಇಂದಿನ ಆಧುನಿಕ ಯುಗದಲ್ಲಿ ಪ್ಲಾಸ್ಟಿಕ್‌ ಪಿಡುಗನ್ನು ಸಂಪೂರ್ಣವಾಗಿ ತೊಡೆದುಹಾಕಲು ಕಷ್ಟ. ಆದರೂ ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವೆಂಬಂತೆ ಪ್ಲಾಸ್ಟಿಕ್ ವಸ್ತು ತಯಾರಿಕಾ ಕಾರ್ಖಾನೆಗಳನ್ನು ಸ್ಥಗಿತಗೊಳಿಸಬೇಕು. ಪ್ಲಾಸ್ಟಿಕ್‌ ನಿಷೇಧದ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರಬೇಕು.

ಕೆ.ಜಿ.ಸರೋಜಾ ನಾಗರಾಜ್,ಪಾಂಡೋಮಟ್ಟಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.