ADVERTISEMENT

ಬೇಕಾಗಿದೆ ರಾಜಕೀಯ ಪಾಠಶಾಲೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 19:45 IST
Last Updated 9 ಮಾರ್ಚ್ 2020, 19:45 IST

‘ರಾಹುಲ್‌ ಗಾಂಧಿ ಅವರು ಸಭ್ಯತೆ ಮತ್ತು ಭಾಷೆಯ ಮೇಲೆ ಹಿಡಿತವನ್ನು ಕಲಿಯಬೇಕಾಗಿರುವುದರಿಂದ ಅವರನ್ನು ರಾಜಕೀಯ ಶಾಲೆಗೆ ಸೇರಿಸಬೇಕಾಗಿದೆ’ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಇತ್ತೀಚೆಗೆ ಹೇಳಿದ್ದಾರೆ. ಇದನ್ನು ಕೇಳಿದಾಗ, ಅಂತಹ ‘ರಾಜಕೀಯ ಶಾಲೆ’ ಎಲ್ಲಿದೆ ಎಂಬ ಪ್ರಶ್ನೆ ಮೂಡುತ್ತದೆ. ಹಾಗಿದ್ದರೆ, ಸಚಿವರ ಪಕ್ಷಕ್ಕೆ ಸೇರಿದವರ‍್ಯಾರೂ ಭಾಷೆಯ ಮೇಲಿನ ಹಿಡಿತ ಕಳೆದುಕೊಳ್ಳುವುದಿಲ್ಲವೇ ಮತ್ತು ಸಭ್ಯತೆಯನ್ನು ಮೀರಿ ನಡೆಯುವುದಿಲ್ಲವೇ?

ಯಾವ ಪಕ್ಷದವರೇ ಆಗಲಿ ಜವಾಬ್ದಾರಿ ಅರಿತು ಮಾತನಾಡುವುದು ದೇಶದ ಒಳಿತಿನ ದೃಷ್ಟಿಯಿಂದ ಒಳ್ಳೆಯದು. ಇದಕ್ಕೆ ಪೂರಕವಾಗಿ ರಾಜಕಾರಣಿಗಳಿಗೆ ಪಾಠಶಾಲೆಗಳು ಇರಬೇಕು. ರಾಜಕೀಯ ಸೇರಬಯಸುವವರೆಲ್ಲರಿಗೂ ಅಲ್ಲಿ ಒಳ್ಳೆಯ ಮಾತು, ಸಭ್ಯತೆಯ ನಡವಳಿಕೆ ಹೇಳಿಕೊಡಬೇಕು.

– ಟಿ.ಎಂ.ಮಾನಪ್ಪ,ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.