ADVERTISEMENT

ಶಾಸಕರಾಗಿ ಜನಸೇವೆ ಸಾಧ್ಯವಿಲ್ಲವೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 14 ಜನವರಿ 2021, 19:30 IST
Last Updated 14 ಜನವರಿ 2021, 19:30 IST

‘ಅಂತೂ ಇಂತೂ ಕುಂತಿಪುತ್ರರಿಗೆ ರಾಜ್ಯ ಸಿಕ್ಕಿತು’ ಎಂಬಂತೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿ, ಸಪ್ತ ಮಹಾರಥಿಗಳಿಗೆ ಸಚಿವ ಪಟ್ಟ ದಕ್ಕಿದೆ. ಯಡಿಯೂರಪ್ಪನವರು ಉಸ್ಸಪ್ಪಾ ಎನ್ನುವಷ್ಟರಲ್ಲಿ, ಪಟ್ಟವಂಚಿತರ ಗೋಳು, ನಿಟ್ಟುಸಿರು, ಕಣ್ಣೀರಧಾರೆ, ವಾಗ್ದಾಳಿ, ಪ್ರತಿಭಟನೆ, ಶಾಪಗಳು ಪುಂಖಾನುಪುಂಖವಾಗಿ ತೂರಿ ಬರುತ್ತಿವೆ.

ಹಾಗಿದ್ದರೆ ಶಾಸಕರಾಗಿ ಇದ್ದುಕೊಂಡು, ತಮಗೆ ಮತ ನೀಡಿದ ಮತದಾರರ ಸೇವೆ ಮಾಡಲು ಸಾಧ್ಯವೇ ಇಲ್ಲವೇ? ಸಾರ್ಥಕತೆ ಇರುವುದು ಮಂತ್ರಿಪಟ್ಟದಲ್ಲಿ ಮಾತ್ರವೇ? ಜನಪ್ರತಿನಿಧಿಗಳಾಗಿ ಆರಿಸಿ ಬಂದ ಎಲ್ಲರೂ ಸಚಿವರಾಗ
ಬೇಕೆಂದರೆ ಹೇಗೆ ಸಾಧ್ಯ?

- ಕೆ.ಶ್ರೀನಿವಾಸ ರಾವ್,ಹರಪನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.