ADVERTISEMENT

ರಾಜಕಾರಣದ ಮರ್ಮ ಅರಿತು ಮತ ಕೊಡಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 20:00 IST
Last Updated 11 ನವೆಂಬರ್ 2018, 20:00 IST

ಭಾರತದಲ್ಲಿ ಇರುವಷ್ಟು ರಾಜಕೀಯ ಪಕ್ಷಗಳು ಬಹುಶಃ ವಿಶ್ವದ ಇತರ ಯಾವುದೇ ದೇಶದಲ್ಲಿ ಇರಲಾರವು. ಹಾಗಾಗಿ ಜನರನ್ನು ಹೇಗಾದರೂ ಮಾಡಿ ತಮ್ಮತ್ತ ಸೆಳೆದುಕೊಳ್ಳುವ ಜಿದ್ದಾಜಿದ್ದು ರಾಜಕೀಯ ಪಕ್ಷಗಳಲ್ಲಿರುವುದು ಸಹಜ.

ಆದರೆ, ಪಕ್ಷಗಳು ಜನರನ್ನು ತಮ್ಮತ್ತ ಸೆಳೆಯಲು ಅನುಸರಿಸಿದ ಮಾರ್ಗ ಯಾವುದು? ತಮ್ಮ ಪ್ರಣಾಳಿಕೆಯಲ್ಲಿ ಅಭಿವೃದ್ಧಿಯ ವಿಚಾರಗಳನ್ನ ಉಲ್ಲೇಖಿಸುವ ಬದಲು, ಧರ್ಮ– ಜಾತಿಯ ವಿಚಾರಗಳನ್ನು ಮುಂದೆ ಮಾಡಿಕೊಂಡು ಮತ ಯಾಚಿಸುತ್ತಿವೆ. ಧಾರ್ಮಿಕ ವಿಚಾರಗಳನ್ನು ಕೆರಳಿಸಿ ಜನರನ್ನು ಬಹು ಬೇಗ ತಮ್ಮತ್ತ ಸೆಳೆಯಬಹುದು ಎಂಬದು ರಾಜಕೀಯ ಪಕ್ಷಗಳ ಹುನ್ನಾರ. ಇದನ್ನು ತಡೆಯಬೇಕಾದರೆ ಜನರು ಎಚ್ಚೆತ್ತುಕೊಳ್ಳುವುದು ಅಗತ್ಯ.

ಚುನಾವಣೆ ಸಮೀಪಿಸುವಾಗ ಕೆಲವು ಪಕ್ಷಗಳಿಗೆ ರಾಮ ಮಂದಿರ, ದತ್ತಪೀಠ ನೆನಪಾದರೆ, ಇನ್ನೂ ಕೆಲವಕ್ಕೆ ಟಿಪ್ಪು ಜಯಂತಿ, ಮಸೀದಿ ನಿರ್ಮಾಣ ನೆನಪಾಗುತ್ತದೆ. ಜನರು ಈ ಮರ್ಮವನ್ನು ಅರಿತು ಮತದಾನ ಮಾಡಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾದೀತು.

ADVERTISEMENT

–ಅಮಿತಕುಮಾರ ಬಿರಾದಾರ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.