ADVERTISEMENT

ಎಲ್ಲಿ ಮಾಯವಾಗುತ್ತಿವೆ ಪತ್ರಗಳು?

ಕುಣಿಗಲ್ ಜಯಣ್ಣ.ಪಾಂಡವಪುರ
Published 4 ಡಿಸೆಂಬರ್ 2019, 20:11 IST
Last Updated 4 ಡಿಸೆಂಬರ್ 2019, 20:11 IST

ಅಂಚೆ ಇಲಾಖೆಯಿಂದ ಗ್ರಾಹಕರು ದೂರ ಸರಿಯುತ್ತಿರುವುದನ್ನು ಶಾಂತವೀರ ಅವರು ಪ್ರಸ್ತಾಪಿಸಿದ್ದಾರೆ (ವಾ.ವಾ., ಡಿ. 4). ಅಂಚೆ ಇಲಾಖೆಯನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ.

ಅಂಚೆ ಕಚೇರಿಯಲ್ಲಿ ಇತ್ತೀಚೆಗೆ ತುಂಬಾ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. 45 ವರ್ಷಗಳಿಂದ ಅಂಚೆ ಮೂಲಕ ಪತ್ರ ವ್ಯವಹಾರ ನಡೆಸಿದ್ದೇನೆ. ಆದರೆ ಈ ವಿಷಯದಲ್ಲಿ ಒಂದು ವರ್ಷದಿಂದ ಬೇಸರದ ಅನುಭವ ಆಗುತ್ತಿದೆ. ವಾರ್ಷಿಕ ಚಂದಾದಾರನಾಗಿ ಮನೆಗೆ ತರಿಸಿಕೊಳ್ಳುತ್ತಿದ್ದ ಪತ್ರಿಕೆಗಳು ಸರಿಯಾಗಿ ತಲುಪುತ್ತಿಲ್ಲ. ಕೇಳಿದರೆ, ‘ಬಂದರೆ ಖಂಡಿತ ಕೊಡುತ್ತೇವೆ’ ಎಂಬ ಉತ್ತರ ಸಿಗುತ್ತದೆ. ಇಲಾಖೆಯ ಸಿಬ್ಬಂದಿ ಇನ್ನು ಮುಂದಾದರೂ ಪ್ರಾಮಾಣಿಕತೆಯಿಂದ ವರ್ತಿಸುವರೇ ಎಂದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT