ADVERTISEMENT

ವಾಚಕರ ವಾಣಿ: ಹುಚ್ಚು ಹವ್ಯಾಸ; ನಿಯಂತ್ರಣವಿರಲಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 15:36 IST
Last Updated 10 ನವೆಂಬರ್ 2020, 15:36 IST

ಪ್ರಿ ವೆಡ್ಡಿಂಗ್ ಫೋಟೊ ಶೂಟ್ ವೇಳೆ ಕಾವೇರಿ ನದಿಯಲ್ಲಿ ಅವಘಡ ಸಂಭವಿಸಿ ಮೃತರಾದ ವಧು–ವರರ ಸುದ್ದಿ ಓದಿ ಮನಸ್ಸಿಗೆ ತುಂಬಾ ಬೇಸರವಾಯಿತು. ಇತ್ತೀಚೆಗೆ ಇಂತಹ ಫೋಟೊ ಶೂಟ್‌ ಒಂದು ಹುಚ್ಚು ಹವ್ಯಾಸವಾಗಿ ಪರಿಣಮಿಸುತ್ತಿದೆ. ಮೊನ್ನೆ ತಮಿಳುನಾಡಿನಲ್ಲಿ ಇದೇ ರೀತಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೊ ಮತ್ತು ವಿಡಿಯೊ ಶೂಟ್ ಸಂದರ್ಭದಲ್ಲಿ ಅಸಹ್ಯವಾಗಿ ತೆಗೆದ ಫೋಟೊಗಳು ಎಲ್ಲೆಡೆ ವೈರಲ್ ಆಗಿ ಸಮಾಜವನ್ನು ಮುಜುಗರಕ್ಕೀಡಾಗುವಂತೆ ಮಾಡಿದವು.

ಮದುವೆ ಮಂಟಪದಲ್ಲಿ ಪ್ರದರ್ಶನಗೊಳ್ಳುವ ಕೆಲವರ ಪ್ರಿ ವೆಡ್ಡಿಂಗ್ ಫೋಟೊ ಮತ್ತು ವಿಡಿಯೊ ಶೂಟ್‍ಗಳು ನೋಡಲು ಅಸಹ್ಯ ಎನಿಸುವಂತೆಯೂ ಇರುತ್ತವೆ. ವಧು-ವರರ ತಂದೆ ತಾಯಿ, ಬಂಧು ಬಳಗದವರನ್ನು ಕೆಲವೊಮ್ಮೆ ಮುಜುಗರಕ್ಕೆ ಒಳಪಡಿಸುತ್ತವೆ. ಇಲ್ಲಿ ಯಾರಿಗೆ ಬುದ್ಧಿ ಹೇಳಬೇಕು ಎಂಬ ಪ್ರಶ್ನೆ ಮೂಡುತ್ತದೆ. ಇಂತಹ ಫೋಟೊ ಶೂಟ್‍ಗಾಗಿ ವ್ಯಯಿಸುವ ಸಾವಿರಾರು ರೂಪಾಯಿಯಿಂದ ಅನಾಥರಿಗೆ ಒಂದು ಹೊತ್ತು ಸವಿಯಾದ ಊಟ ಕೊಟ್ಟರೆ ನವ ವಧು–ವರರನ್ನು ಮನ ತುಂಬಿ ಆಶೀರ್ವದಿಸಿ ಹೋಗುತ್ತಾರೆ.

–ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.