ADVERTISEMENT

ಕನ್ನಡ ಪದ ಬಳಕೆ ಇರಲಿ

ಯೋ.ಭರತ್ ಕುಮಾರ್
Published 22 ಫೆಬ್ರುವರಿ 2019, 20:00 IST
Last Updated 22 ಫೆಬ್ರುವರಿ 2019, 20:00 IST

‘ಜಂಗಮವಾಣಿ’ ಪದ ಬಳಕೆ ಉಚಿತವಲ್ಲ ಎಂಬ ಡಾ. ಎಂ.ಚಿದಾನಂದಮೂರ್ತಿ ಅವರ ಓಲೆಗೆ (ವಾ.ವಾ., ಫೆ. 21) ಪ್ರತಿಕ್ರಿಯೆ.

ಸ್ಥಿರವಾಣಿ, ಚರವಾಣಿ ಮತ್ತು ಜಂಗಮವಾಣಿ- ಇವೆಲ್ಲ ಸಂಸ್ಕೃತದ ಪದಗಳು. ಮೊಬೈಲ್‌ಗೆ ಕನ್ನಡದ್ದೇ ಆದ ಅಲೆಯುಲಿ, ನಡೆಯುಲಿ ಎಂಬ ಪದಗಳನ್ನು ಬಳಕೆಗೆ ತರಲಾಗಿದೆ. ತಂತಿ ಇಲ್ಲದೆ ಅಲೆಯಲ್ಲಿ ಬರುವ ಉಲಿಯನ್ನು ನಮಗೆ ಕೇಳಿಸುವ ಹಾಗೆ ಮಾಡುವುದರಿಂದ ಅದುಅಲೆಯುಲಿ. ನಡೆದಾಡುತ್ತಾ ಮಾತನಾಡಬಹುದಾದ್ದರಿಂದ ಅದು ನಡೆಯುಲಿ. ಅಲ್ಲದೆ ಲ್ಯಾಂಡ್‌ಲೈನ್ ಫೋನ್‌ಗೆ ‘ನೆಲೆಯುಲಿ’ ಎಂಬ ಕನ್ನಡದ್ದೇ ಪದವನ್ನು ಬಳಕೆಗೆ ತರಲಾಗಿದೆ.

ಹೀಗೆ, ನಾವು ಹೆಚ್ಚು ಹೆಚ್ಚು ಕನ್ನಡದ್ದೇ ಪದಗಳನ್ನು ಹೊಸ ಹೊಸ ಕಡೆಗಳಲ್ಲಿ ಬಳಸಿದರೆ ಕನ್ನಡವೂ ಬೆಳೆಯುತ್ತದೆ, ಕನ್ನಡಿಗರ ಬೆಳವಣಿಗೆಯೂ ಸಾಧ್ಯ.

ADVERTISEMENT

– ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.