ADVERTISEMENT

ಪ್ರಶಸ್ತಿಗೆ ಇಷ್ಟು ಭಾರಿ ಮೊತ್ತ ಬೇಕೇ?

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 17:28 IST
Last Updated 10 ಸೆಪ್ಟೆಂಬರ್ 2020, 17:28 IST

ಹಿರಿಯ ವಿಮರ್ಶಕ ಜಿ.ಎಸ್‌.ಆಮೂರ ಅವರು 2020ನೇ ಸಾಲಿನ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತೋಷದ ಸಂಗತಿ. ಆಮೂರ ಅವರು ಕನ್ನಡಕ್ಕೆ ನೀಡಿರುವ ಮೌಲಿಕ ಕೊಡುಗೆ ಪ್ರಖರ, ವಿಶಿಷ್ಟ. ಆದರೆ ಇಲ್ಲೊಂದು ಸೂಕ್ಷ್ಮವನ್ನು ಗಮನಿಸಲೇಬೇಕಿದೆ. ಹಿಂದೆಂದೂ ಕಂಡು ಕೇಳರಿಯದಂಥ ಕೋವಿಡ್ -19, ಎಲ್ಲ ಮಗ್ಗುಲು ಗಳಲ್ಲೂ ತೀವ್ರ ಆರ್ಥಿಕ ಸಂಕಷ್ಟವೊಡ್ಡಿ ಬದುಕನ್ನು ಸೊರಗಿಸಿದೆ. ಹೀಗಿರುವಾಗ, ಈ ಪ್ರಶಸ್ತಿಗೆ ₹ 7 ಲಕ್ಷದಷ್ಟು ದೊಡ್ಡ ಮೊತ್ತ ಅಗತ್ಯವೇ? ಇದನ್ನು ಪರಿಷ್ಕರಿಸಬಹುದಲ್ಲವೇ? ಮೊತ್ತ ಕಡಿಮೆಯಾಗಿಸಿದರೆ ಪ್ರಶಸ್ತಿಯ ಮೌಲ್ಯವೇನೂ ಕಡಿಮೆಯಾಗದು. ಪ್ರಶಸ್ತಿಯ ಮೊತ್ತವೇ ಪ್ರತಿಷ್ಠೆಯಾಗಬಾರದು.

–ಬಿಂಡಿಗನವಿಲೆ ಭಗವಾನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT