ADVERTISEMENT

ಗುಣಮಟ್ಟದ ವಿದ್ಯುತ್‌ ಪೂರೈಸಲಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 19:50 IST
Last Updated 19 ಡಿಸೆಂಬರ್ 2018, 19:50 IST

ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯದ ರೈತರಿಗೆ ಹಗಲಿನಲ್ಲಿ 10 ಗಂಟೆಗಳ ತ್ರಿಫೇಸ್ ವಿದ್ಯುತ್ ನೀಡುವ ಭರವಸೆ ನೀಡಿದ್ದಾರೆ. ಆದರೆ ಎಷ್ಟು ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ನೀಡುತ್ತಾರೆ ಎನ್ನುವುದಕ್ಕಿಂತ ಎಷ್ಟು ಗುಣಮಟ್ಟದ ತ್ರಿಫೇಸ್ ವಿದ್ಯುತ್ ನೀಡುತ್ತಾರೆ ಎನ್ನುವುದು ಮುಖ್ಯ.

ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಮುಖ್ಯವಾಗಿ ಗುಣಮಟ್ಟವಿಲ್ಲದ, ಹಳೆಯ ಟ್ರಾನ್ಸ್‌ಫಾರಂಗಳನ್ನು ಬದಲಿಸಬೇಕು. ನಿರ್ದಿಷ್ಟ ಅವಧಿಯಲ್ಲಿ ತಡೆರಹಿತವಾಗಿ, ಉತ್ತಮ ವೋಲ್ಟೇಜ್‌ವುಳ್ಳ ಗುಣಮಟ್ಟದ ವಿದ್ಯುತ್ ಸರಬರಾಜು ಬೇಕಾಗಿದೆ. 5 ರಿಂದ 6 ಗಂಟೆ ತ್ರಿಫೇಸ್ ಗುಣಮಟ್ಟದ ವಿದ್ಯುತ್ ಸಾಕು.

ಸಣ್ಣಪುಟ್ಟ ದುರಸ್ತಿಗೆ ನುರಿತ ಲೈನ್‌ಮನ್‌ಗಳ ಅವಶ್ಯಕತೆ ಇದೆ. ಸಮಸ್ಯೆಗಳನ್ನು ಹೇಳಿಕೊಳ್ಳಲು ಅಧಿಕಾರಿಗಳು ಕೈಗೆ, ಫೋನ್‌ಗೆ
ಸಿಗುವುದಿಲ್ಲ. ಸಿಕ್ಕರೂ ಸರಿಯಾಗಿ ಸ್ಪಂದಿಸುವುದಿಲ್ಲ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿ ರೈತರ ‘ಮೋಟರ್’ ಕೆಟ್ಟರೆ ಅದನ್ನು ಸರಿಪಡಿಸಲು ₹ 5 ಸಾವಿರದಿಂದ 6 ಸಾವಿರ ಹಣ ಬೇಕಾಗುತ್ತದೆ. ಆದ್ದರಿಂದ ಕೇವಲ 10 ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜಿಗೆ ಆದೇಶಿಸಿದರೆ ಪ್ರಯೋಜನವಿಲ್ಲ, ಗುಣಮಟ್ಟದ ವಿದ್ಯುತ್ ಪೂರೈಸಲಿ.

ADVERTISEMENT

ಕೆ.ಪಿ. ವಿಷ್ಣುವರ್ಧನ,ಕೊಡಗವಳ್ಳಿಹಟ್ಟಿ, ಹೊಳಲ್ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.