ADVERTISEMENT

ಭ್ರಷ್ಟಾಚಾರಕ್ಕೆ ಬೆಂಬಲ ನಾಚಿಕೆಗೇಡು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 17:49 IST
Last Updated 5 ಮಾರ್ಚ್ 2020, 17:49 IST

ಭ್ರಷ್ಟಾಚಾರ ಎಂಬುದು ಆಡಳಿತ ವ್ಯವಸ್ಥೆಗೆ ಬಹುದೊಡ್ಡ ಶಾಪ. ದಕ್ಷ ಅಧಿಕಾರಿಗಳನ್ನು ನೇಮಿಸುವ ಮೂಲಕ ಭ್ರಷ್ಟಾಚಾರರಹಿತ ಆಡಳಿತ ವ್ಯವಸ್ಥೆ ನಿರ್ಮಿಸುವ ಗುರುತರ ಜವಾಬ್ದಾರಿ ಕೆಪಿಎಸ್‍ಸಿಯಂತಹ ಸಂಸ್ಥೆಯ ಮೇಲಿದೆ. ದುರದೃಷ್ಟವಶಾತ್‌ ಇಂದು ಈ ಸಂಸ್ಥೆಯು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ.

ಇದಕ್ಕೆ ಜ್ವಲಂತ ಉದಾಹರಣೆ 2011ರ ಕೆಎಎಸ್ ನೇಮಕಾತಿ. ಸದರಿ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದನ್ನು ಸಿಐಡಿ ತನ್ನ ಸಾವಿರಾರು ಪುಟಗಳ ದಾಖಲೆ, ಆಡಿಯೊ, ವಿಡಿಯೊ ಹಾಗೂ ಪ್ರತ್ಯಕ್ಷ ಸಾಕ್ಷಿಗಳ ಮೂಲಕ ಸಾಬೀತುಪಡಿಸಿದೆ. 2011ರ ಕೆಎಎಸ್ ನೇಮಕಾತಿ ರದ್ದುಪಡಿಸುವಂತೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತಮ್ಮ ತೀರ್ಪಿನಲ್ಲಿ ಸ್ವಷ್ಟವಾಗಿ ತಿಳಿಸಿವೆ.

ಆದರೆ, ಆಡಳಿತಾರೂಢ ಪಕ್ಷದ ಕೆಲ ಶಾಸಕರು 2011ರ ಕೆಎಎಸ್ ಆಯ್ಕೆ ಪಟ್ಟಿಗೆ ಮರುಜೀವ ನೀಡಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ರೀತಿ ಭ್ರಷ್ಟಾಚಾರಕ್ಕೆ ಬೆಂಗಾವಲಾಗಲು ಯಾವುದೇ ಜನಪ್ರತಿನಿಧಿ ಹೊರಟರೂ ಅದನ್ನು ಪ್ರಜ್ಞಾವಂತರು ಖಂಡಿಸಬೇಕು.
-ವೇದಮೂರ್ತಿ ಅನಂತ ಭಟ್, ಧರ್ಮಸ್ಥಳ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.