ADVERTISEMENT

ನೀರು ಪೋಲು: ವಿನಾಯಿತಿ ಸಲ್ಲದು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 1 ಸೆಪ್ಟೆಂಬರ್ 2020, 19:45 IST
Last Updated 1 ಸೆಪ್ಟೆಂಬರ್ 2020, 19:45 IST

ಅಂತರ್ಜಲ ಪೋಲಾಗುವುದನ್ನು ತಡೆಯಲು ತಪ್ಪಿತಸ್ಥರಿಗೆ ದಂಡ ವಿಧಿಸುವುದೂ ಸೇರಿದಂತೆ ಕಠಿಣ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ರಾಜ್ಯಗಳಿಗೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿರುವುದನ್ನು ಓದಿ (ಪ್ರ.ವಾ., ಆ. 31) ಖುಷಿಯಾಯಿತು. ಸ್ಮಾರ್ಟ್ ಸಿಟಿ ಆಗಲಿರುವ ದಾವಣಗೆರೆಯಲ್ಲಿ 24/7 ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಈಗಾಗಲೇ ಭರದಿಂದ ಸಾಗಿದೆ. ನೀರು ಪೋಲಾದರೆ ಮೀಟರ್ ಲೆಕ್ಕಕ್ಕೆ ಹಣ ವ್ಯರ್ಥ ಮಾಡಿದಂತೆಯೇ ಎಂದು ತಿಳಿದು ಆಗಲಾದರೂ ಬಳಕೆದಾರರು ಬದಲಾಗುವರೋ ಕಾದು ನೋಡಬೇಕು.

ಪ್ರಸ್ತುತ ವ್ಯವಸ್ಥೆಯಲ್ಲಿ ವಾರಕ್ಕೆ ಎರಡು ದಿನ ನೀರು ಬರುತ್ತಿದೆ. ಆದರೆ ಅದೆಷ್ಟೋ ಮನೆಗಳ ಟ್ಯಾಂಕ್ ತುಂಬಿ ಪೋಲಾಗುವುದನ್ನು ಗಮನಿಸಿದರೆ ವ್ಯಥೆಯಾಗುತ್ತದೆ. ಇಂತಹವರಿಗೆ ದಂಡ ವಿಧಿಸುವ ಯಾವುದೇ ವ್ಯವಸ್ಥೆ ಇಲ್ಲ. ನೀರು ಪೋಲಾಗುವುದನ್ನು ಮನೆಯವರ ಗಮನಕ್ಕೆ ತಂದರೆ, ‘ನೀರು ಬಿಡುವ ನಿರ್ದಿಷ್ಟ ದಿನ, ಸರಿಯಾದ ಸಮಯವನ್ನು ನಮಗೆ ತಿಳಿಸದೇ ಇರುವುದರಿಂದ ನಮ್ಮ ಗಮನಕ್ಕೆ ಬಾರದೆ ನೀರು ಪೋಲಾಗುತ್ತಿದೆ, ಸ್ಸಾರಿ’ ಎನ್ನುತ್ತಾರೆ. ಹೀಗಾಗಿ, ಮನೆಗಳಿಗೆ ಸರಬರಾಜು ಆಗುತ್ತಿರುವ ನೀರನ್ನು ವ್ಯರ್ಥ ಮಾಡುವವರ ಮೇಲೂ ಕೂಡಲೇ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಬೇಕು.

ರಘುನಾಥ ರಾವ್ ತಾಪ್ಸೆ, ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.