ADVERTISEMENT

ಕ್ರಾಸಿಂಗ್‌ ವಿಳಂಬದಿಂದ ಸಂಕಷ್ಟ

ಬಿ.ಎಸ್‌.ತಿಮ್ಮೋಲಿ, ಶಿವಮೊಗ್ಗ
Published 28 ಏಪ್ರಿಲ್ 2019, 18:30 IST
Last Updated 28 ಏಪ್ರಿಲ್ 2019, 18:30 IST

ಶಿವಮೊಗ್ಗದಿಂದ ಬೆಂಗಳೂರಿಗೆ ಇತ್ತೀಚೆಗೆ ಜನಶತಾಬ್ದಿ ರೈಲು ಗಾಡಿ ಪ್ರಾರಂಭವಾಗಿದೆ. ಕೇವಲ ಐದು ಗಂಟೆಗಳಲ್ಲಿ ಊರು ಸೇರಬಹುದು ಎಂದು ಪ್ರಯಾಣಿಕರು ಸಂತೋಷಪಟ್ಟಿದ್ದಾರೆ. ಆದರೆ ಪ್ರಯಾಣ ಪ್ರಯಾಸವಾಗುತ್ತಿದೆ. ಇದೇ ತಿಂಗಳ 21ರಂದು ಸಂಜೆ 5.30ಕ್ಕೆ ಜನಶತಾಬ್ದಿ ರೈಲುಗಾಡಿಯು ಬೆಂಗಳೂರು ಬಿಟ್ಟು ರಾತ್ರಿ 10.30ಕ್ಕೆ ಶಿವಮೊಗ್ಗ ತಲುಪಬೇಕಾಗಿತ್ತು. ಆದರೆ ಮಧ್ಯದಲ್ಲಿ, ಅಂದರೆ ಬಾಣಸಂದ್ರ–ಕರಡಿ ನಿಲ್ದಾಣಗಳ ಮಧ್ಯೆ ಕ್ರಾಸಿಂಗ್‌ನ ಕಾರಣ ಸುಮಾರು 7 ಗಂಟೆಗೆ ರೈಲುಗಾಡಿಯನ್ನು ನಿಲ್ಲಿಸಲಾಯಿತು.ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ರೈಲು, 8 ಗಂಟೆಯವರೆಗೂ ಕದಲಲಿಲ್ಲ. ಕ್ರಾಸಿಂಗ್‌ನ ಕಾರಣ ಐದು–ಹತ್ತು ನಿಮಿಷಗಳ ವಿಳಂಬ ಸರ್ವೇಸಾಮಾನ್ಯ. ಆದರೆ ಅಂದು ಒಂದು ಗಂಟೆಯವರೆಗೆ ನಿಲ್ಲಿಸಿದ್ದನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು.

ಈ ವೇಳೆಯಲ್ಲಿ ಪ್ರಯಾಣಿಕರ ಗೋಳು ಹೇಳತೀರದು. ಏಕೆಂದರೆ ತಡರಾತ್ರಿ ಶಿವಮೊಗ್ಗ ತಲುಪಿದರೆ, ಅಲ್ಲಿಂದ ಮನೆಗೆ ಹೋಗಲು ಆಟೊ ರಿಕ್ಷಾದವರು ಕೇಳಿದಷ್ಟು ಬಾಡಿಗೆ ಕೊಡಬೇಕಾಗುತ್ತದೆ. ಸಮಯ ನಿರ್ವಹಣೆಯ ಬಗ್ಗೆ ರೈಲ್ವೆ ಇಲಾಖೆ ಚಿಂತನೆ ಮಾಡಿ, ವಿಳಂಬವಾಗದಂತೆ ವ್ಯವಸ್ಥೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT