ADVERTISEMENT

ವಾಚಕರ ವಾಣಿ | ಜನಸಾಮಾನ್ಯರಿಗೆ ಅಭದ್ರತೆಯ ಸಂದೇಶ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 19 ಮೇ 2022, 19:45 IST
Last Updated 19 ಮೇ 2022, 19:45 IST

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಅಪರಾಧಿಯನ್ನು ಬಿಡುಗಡೆ ಮಾಡಿರುವ ಸುದ್ದಿ (ಪ್ರ.ವಾ., ಮೇ 19) ಓದಿ ಏಕೋ ಕಸಿವಿಸಿಯಾಯಿತು. ರಾಜೀವ್ ಗಾಂಧಿ ಅವರು ಹತ್ಯೆಯಾಗಿ ಸುಮಾರು 30ಕ್ಕೂ ಹೆಚ್ಚು ವರ್ಷಗಳು ಗತಿಸಿಹೊದರೂ ಆ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಹಾಡಲು ಇನ್ನೂ ಸಾಧ್ಯವಾಗದೇ ಇರುವುದು ನಾಚಿಕೆಗೇಡಿನ ಸಂಗತಿ. ಅಷ್ಟಾದರೂ ಕೊನೆಗೆ ಅಪರಾಧಿಯನ್ನು ಬಿಡುಗಡೆ ಮಾಡುವಂತೆ ಆದಾಗ, ‘ಒಬ್ಬ ಮಾಜಿ ಪ್ರಧಾನಿಯ ಕಥೆಯೇ ಹೀಗಾದರೆ ಇನ್ನು ನಮ್ಮ ಪಾಡೇನು?’ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದರೆ ಅಚ್ಚರಿ ಏನಿಲ್ಲ. ಇದರಿಂದ ಜನಸಾಮಾನ್ಯರಿಗೆ ಅಭದ್ರತೆಯ ಸಂದೇಶ ರವಾನೆಯಾದರೆ ಅದಕ್ಕೆ ಹೊಣೆ ಯಾರು?!

–ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರ್, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT