ADVERTISEMENT

ವಾಚಕರ ವಾಣಿ: ದ್ವಿಮುಖ ಧೋರಣೆ ಖಂಡನೀಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 19:23 IST
Last Updated 20 ಅಕ್ಟೋಬರ್ 2020, 19:23 IST

ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ 3 ತಿಂಗಳ ಕಾಲ ಚಾಲನಾ ಪರವಾನಗಿ ಅಮಾನತು ಮಾಡಲು ಸಾರಿಗೆ ಇಲಾಖೆ ತೀರ್ಮಾನಿಸಿದೆ (ಪ್ರ.ವಾ., ಅ. 20). ಜನ ತಮ್ಮ ಪ್ರಾಣ ರಕ್ಷಣೆ ಸಲುವಾಗಿ ಹೆಲ್ಮೆಟ್ ಧರಿಸುವುದು ಔಚಿತ್ಯ. ಆದರೆ ವಾಹನ ಚಲಾಯಿಸುವಾಗ ಇತರ ಅನೇಕ ಕಾರಣಗಳಿಂದಲೂ ಅವರು ಜೀವ ಕಳೆದುಕೊಳ್ಳುತ್ತಿರುವ ಬಗ್ಗೆ ಸಹ ಸರ್ಕಾರ ಕಾಳಜಿ ತೋರಬೇಕು. ರಸ್ತೆ ಹೊಂಡಗಳಿಂದ ವಾಹನ ಸವಾರರು ಅನುಭವಿಸುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಅದೆಷ್ಟೋ ಜನ ಗುಂಡಿಯಲ್ಲಿ ನಿಲ್ಲುವ ಮಳೆ ನೀರಿನಿಂದ ಅಪಘಾತಕ್ಕೆ ಒಳಗಾಗುತ್ತಾರೆ.

ಹೀಗಿರುವಾಗ, ಹೆಲ್ಮೆಟ್‌ ಧರಿಸದಿರುವುದಕ್ಕೆ ಪರವಾನಗಿ ಅಮಾನತುಗೊಳಿಸುವುದಾದರೆ, ಗುಂಡಿಗಳನ್ನು ಮುಚ್ಚದ ಸರ್ಕಾರವನ್ನು ಯಾರೂ ಕೇಳುವವರು ಇಲ್ಲವೇ? ಸರ್ಕಾರದ ಇಂತಹ ದ್ವಿಮುಖ ಧೋರಣೆ ಖಂಡನೀಯ.

-ರಿಯಾಝ್ ಅಹ್ಮದ್, ರೋಣ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.