ADVERTISEMENT

ಜನತಂತ್ರದ ಆಶಯಕ್ಕೆ ಹಿಡಿದ ಕನ್ನಡಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 15:46 IST
Last Updated 16 ಜನವರಿ 2022, 15:46 IST

ಭಾರತೀಯ ಮೂಲದ ಬ್ರಿಟನ್ ರಾಜಕಾರಣಿ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗುವ ಸಂಭವ ಇರುವ ಸುದ್ದಿ (ಪ್ರ.ವಾ., ಜ. 15) ಭಾರತೀಯರಿಗೆ ಹೆಮ್ಮೆಯ ವಿಚಾರ. ಕುತೂಹಲಕರ ಸಂಗತಿಯೆಂದರೆ, ಸದ್ಯ ಆ ದೇಶದ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕೋವಿಡ್ ನಿಯಮಗಳನ್ನು ಮೀರಿ ಔತಣಕೂಟದಲ್ಲಿ ಭಾಗವಹಿಸಿದ್ದನ್ನು ಪ್ರಶ್ನಿಸಿ ರಾಜೀನಾಮೆಗೆ ಒತ್ತಾಯ ಕೇಳಿಬಂದಿರುವುದು. ಮತ್ತೊಂದು ಕುತೂಹಲದ ಅಂಶವೆಂದರೆ, ಈ ಘಟನೆಯಲ್ಲಿ ವಿರೋಧ ಪಕ್ಷಗಳು ಮಾತ್ರವಲ್ಲದೆ ಆಡಳಿತಾರೂಢ ಪಕ್ಷದ ಸದಸ್ಯರೂ ಪ್ರಧಾನಿಯವರ ನಡೆಯನ್ನು ಒಪ್ಪದೆ ರಾಜೀನಾಮೆಗೆ ಒತ್ತಾಯಿಸಿರುವುದು. ಇದು ಅದ್ಭುತವಾದ ಜನತಂತ್ರದ ಮೌಲ್ಯ ಮತ್ತು ಆಶಯಕ್ಕೆ ಹಿಡಿದ ಕನ್ನಡಿಯಾಗಿದೆ.

ಡಾ. ಜಿ.ಬೈರೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT