ADVERTISEMENT

ವಾಚಕರ ವಾಣಿ | ಕೊಡುಗೈ ದಾನ: ಅತಿಯಾದ ನಿರೀಕ್ಷೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ಜೂನ್ 2022, 20:00 IST
Last Updated 15 ಜೂನ್ 2022, 20:00 IST

‘ಸಿದ್ಧಿಸಲಿ ಸಲ್ಲುವುದ ಹಂಚುವ ಬುದ್ಧಿ’ ಎಂಬ ಸದಾಶಿವ್‌ ಸೊರಟೂರು ಅವರ ಲೇಖನ (ಸಂಗತ, ಜೂನ್‌ 15) ಓದಿ, ಇವರು ಇನ್ನೂ ಯಾವ ಕಾಲದಲ್ಲಿ ಇದ್ದಾರೆ ಎನಿಸಿತು. ಎಷ್ಟಿದ್ದರೂ ಬೇಕು ಬೇಕು ಎನ್ನುವ ಈಗಿನ ಮನಃಸ್ಥಿತಿ ಯಲ್ಲಿ, ಕಡೆಯಪಕ್ಷ ತನಗೆ ಉಪಯೋಗವಾಗದೆ ಬೇರೆಯವರಿಗೆ ಉಪಯೋಗವಾಗುವ ವಸ್ತುಗಳನ್ನು ಕೊಟ್ಟರೂ ಅದು ಮೆಚ್ಚಬಹುದಾದ ಗುಣವೇ. ಇನ್ನು ಉಪಯೋಗಿಸುತ್ತಿರುವ ಅಥವಾ ಹೊಸತನ್ನು ಕೊಡುವ ವಿಚಾರವನ್ನು ನಿರೀಕ್ಷಿಸುವುದು ಸ್ವಲ್ಪ ಅತಿಯಾಯಿತೇನೋ ಎನಿಸುತ್ತದೆ. ಅಂತಹ ದಾನಶೂರ ಕರ್ಣರನ್ನು ಈ ಕಲಿಯುಗದಲ್ಲಿ ನಿರೀಕ್ಷಿಸಲಾಗದು.

-ಟಿ.ವಿ.ಬಿ.ರಾಜನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT