ADVERTISEMENT

ವಾಚಕರ ವಾಣಿ | ಹಣದ ಆಸೆಗೆ ಮರುಳಾಗುವುದು ಬೇಡ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಆಗಸ್ಟ್ 2022, 20:45 IST
Last Updated 5 ಆಗಸ್ಟ್ 2022, 20:45 IST

‘ಗಾಳಕ್ಕೆ ಸಿಲುಕುವುದು ಬೇಡ’ ಎಂಬ ಶೀರ್ಷಿಕೆಯ ರಾಜಕುಮಾರ ಕುಲಕರ್ಣಿ ಅವರ ಲೇಖನ (ಸಂಗತ, ಆ. 4) ಅರ್ಥಪೂರ್ಣವಾಗಿದೆ. ಸುಲಭವಾಗಿ ಎಲ್ಲರಿಗೂ ನಿಲುಕುವಂತೆ ಅವರು ವಿವರಿಸಿದ್ದಾರೆ. ಜಾತಿ, ಧರ್ಮ, ಪ್ರದೇಶ, ಭಾಷೆಯ ಹೆಸರಿನಲ್ಲಿ ವೋಟಿಗಾಗಿ ಗಾಳ ಹಾಕುವ ರಾಜಕಾರಣಿಗಳ ಹುನ್ನಾರಗಳನ್ನು ಜನ ಅರಿತು ಹೊಣೆಗಾರಿಕೆಯಿಂದ ಮತ ಚಲಾಯಿಸಿದರೆ ಜನತಂತ್ರದ ಬೇರು ಬಲಗೊಳ್ಳುತ್ತದೆ.

ರಾಜಕಾರಣಿಗಳಿಗೆ ಓದಿನ ಕೊರತೆ ಇರುವುದು ಸತ್ಯ. ಆದರೆ ಇದು ಕಾಂಚಾಣದ ಕುಣಿತಕ್ಕೆ ಮರುಳಾಗುವ ಕಾಲಘಟ್ಟ. ದುಡ್ಡಿನ ಆಸೆಗಾಗಿ ಮತ ಮಾರಿಕೊಳ್ಳುವ ಪರಿಪಾಟ ಹೆಚ್ಚುತ್ತಿರುವುದರಿಂದ ರಾಜಕಾರಣಿಗಳಲ್ಲಿ ಖರೀದಿಸುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಒಂದು ದಿನದ ಮಟ್ಟಿಗೆ ಅವರು ಕೊಡುವ ನಾಲ್ಕು ಕಾಸಿಗೆ ಮರುಳಾಗಿ ಮತದ ಮಾನ ಕಳೆಯಬಾರದು. ಜನರಲ್ಲಿ ಇಂತಹ ಪ್ರಜ್ಞೆ ಬೆಳೆದಾಗ ಪುನಃ ಒಳ್ಳೆಯ ನಾಯಕರನ್ನು ಕಾಣಬಹುದು.

-ಬಸವರಾಜ ತಳವಾರ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT