ADVERTISEMENT

ನೋವಿಗೆ ಪ್ರೇರಣೆಯಾಯ್ತೇ ಸಂಕುಚಿತ ಭಾವ?

​ಪ್ರಜಾವಾಣಿ ವಾರ್ತೆ
Published 8 ಮೇ 2020, 19:45 IST
Last Updated 8 ಮೇ 2020, 19:45 IST

ನಿಸಾರ್ ಅಹಮದ್ ಅವರ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ...’ ಪದ್ಯವನ್ನು ಓದಿದಾಗ ‘ಮನಸ್ಸು ಭಾರವಾಗುತ್ತದೆ’ ಎಂದಿರುವ ಡಾ. ಕೆ.ಎಸ್.ಗಂಗಾಧರ ಅವರ ಮಾತು (ವಾ.ವಾ., ಮೇ 5) ಉಚಿತವಾಗಿಯೇ ಇದೆ. ಆದರೆ, ‘ಕೆಲವರ ತಪ್ಪಿನಿಂದಾಗಿ ಇಡೀ ಸಮುದಾಯವನ್ನು ಅನುಮಾನದ ದೃಷ್ಟಿಯಿಂದ ನೋಡುವ ಪ್ರವೃತ್ತಿಯೇ ಈ ನೋವಿಗೆ ಮೂಲ ಕಾರಣ’ ಎಂದಿರುವುದು ಅಷ್ಟು ಸಮಂಜಸ ಎನಿಸುವುದಿಲ್ಲ.

ಪದ್ಯದ ಯಾವ ಸಾಲುಗಳಲ್ಲಿಯೂ ಅವರು ಇಡೀ ಸಮುದಾಯವನ್ನು ಕುರಿತು ಬರೆದಿರುವ ಸೂಚನೆ ಕಂಡುಬರುವುದಿಲ್ಲ. ‘ನಿಮ್ಮೊಡನೆ ಕಾಫಿ ಹೀರಿ ಪೇಪರೋದಿ ಹರಟಿ’, ‘ನಿಮ್ಮ ಕುಡಿತ ಕುಣಿತ ಕೂಟಗಳು’, ‘ನನ್ನೆದುರಿನಲ್ಲೇ ತನಿಖೆ ಮಾಡುವ ಕ್ಷಣವನ್ನು’ ಮುಂತಾದ ಸಾಲುಗಳು ಅವರೊಡನಾಡಿದ ಮಂದಿಯಲ್ಲಿ ಕೆಲವರನ್ನು ಮಾತ್ರ ಸೂಚಿಸುತ್ತವೆಯಲ್ಲವೇ?

ಗಂಗಾಧರರ ಆ ಮಾತನ್ನು ಹೀಗೆ ಹೇಳಬಹುದೇನೊ: ಕೆಲವರು ತಮ್ಮ ವರ್ತನೆಗಳಿಂದ ಇಡೀ ಸಮುದಾಯವೇ ತಲೆತಗ್ಗಿಸುವಂತೆ ಮಾಡುತ್ತಾರೆ. ಕವಿಗಾಗಿರುವ ನೋವು ಅಭಿವ್ಯಕ್ತಿಸಿಯೇ ತೀರಬೇಕು ಎಂಬಷ್ಟು ತೀವ್ರವಾಗಿ ಕಾಡಿರಬೇಕು. ನೋವಿಗೆ ಮೂಲವಾದದ್ದು ಕೆಲವರ ಮನಸ್ಸಿನ ಸಂಕುಚಿತತೆ ಇರಬಹುದು.

ADVERTISEMENT

-ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.