ADVERTISEMENT

ಶೋಭೆ ತರದ ಸಚಿವರ ಹೇಳಿಕೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 10 ಅಕ್ಟೋಬರ್ 2021, 19:55 IST
Last Updated 10 ಅಕ್ಟೋಬರ್ 2021, 19:55 IST

ಶೋಭೆ ತರದ ಸಚಿವರ ಹೇಳಿಕೆ

‘ಶಾಲಾ ಪಠ್ಯಪುಸ್ತಕಗಳಲ್ಲಿರುವ ದೋಷಗಳನ್ನು ಸಾರ್ವಜನಿಕರು ಗಂಭೀರವಾಗಿ ಗಮನಿಸಿದ್ದರೆ, ಸಂಬಂಧಪಟ್ಟವರ ಮೇಲೆ ಹಲ್ಲೆ ಮಾಡುತ್ತಿದ್ದರು’ ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಹೇಳಿಕೆ (ಪ್ರ.ವಾ., ಅ. 9) ಖಂಡನೀಯ. ಈ ಹೇಳಿಕೆಯ ಮೂಲಕ ಸಚಿವರು ಪಠ್ಯಪುಸ್ತಕ ರಚನಾಕಾರರ ಮೇಲೆ ಪರೋಕ್ಷವಾಗಿ ಹಿಂಸೆಗೆ ಪ್ರಚೋದಿಸಿರುವಂತೆ ತೋರುತ್ತದೆ. ಪಠ್ಯಪುಸ್ತಕ ರಚನೆ ಮಾಡಿರುವವರು ವಿಷಯ ತಜ್ಞರೇ ಆಗಿರುವಾಗ, ಅವುಗಳಲ್ಲಿ ದೋಷಗಳಿದ್ದರೆ ವಿಷಯ ತಜ್ಞರ ಸಮಿತಿ ಪರಿಶೀಲಿಸಿ, ಚರ್ಚಿಸಿ ತೀರ್ಮಾನಿಸಬೇಕು ಎಂಬ ಅರಿವು ಸಚಿವರಿಗೆ ಇರಬೇಕಿತ್ತು.

ಆರ್‌ಎಸ್ಎಸ್ ತತ್ವ ಪ್ರಚಾರಕರೊಬ್ಬರ ಅಧ್ಯಕ್ಷತೆಯಲ್ಲಿಈಗಾಗಲೇ ಸಮಿತಿ ರಚಿಸಿರುವುದೇ ವಿವಾದವಾಗಿರು ವಾಗ, ಆ ತಪ್ಪನ್ನು ಮುಚ್ಚಿಹಾಕಲು ಮತ್ತು ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಈ ರೀತಿ ಸಲ್ಲದ ಹೇಳಿಕೆಗಳನ್ನು ಸಚಿವರು ನೀಡುತ್ತಿರುವಂತೆ ತೋರುತ್ತದೆ. ಸಂವಿಧಾನಬದ್ಧ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಇಂತಹ ಹೇಳಿಕೆಗಳು ಯಾರಿಗೂ ಶೋಭೆ ತರುವುದಿಲ್ಲ.

ADVERTISEMENT

- ಡಾ. ಶಿವಕುಮಾರಿ ಎಂ.ಎಸ್.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.