ADVERTISEMENT

ಜನರ ಕಷ್ಟ ಮನಗಾಣಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 19:30 IST
Last Updated 15 ಜೂನ್ 2020, 19:30 IST

ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಜನ ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಜನರ ಬಳಿ ದುಡ್ಡು ಹರಿದಾಡಲು ಇನ್ನೂ ಸಮಯಾವಕಾಶ ಬೇಕು. ಆದರೆ ಸರ್ಕಾರ ಮಾತ್ರ ಇದನ್ನು ಗಣನೆಗೆ ತೆಗೆದುಕೊಳ್ಳದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಒಂದೇ ಸಮನೆ ಏರಿಸುತ್ತಿದೆ. ಸಾರ್ವಜನಿಕ ಸಾರಿಗೆ ಸೇವೆಯನ್ನು ಬಳಸಲು ಜನರು ಇನ್ನೂ ಹಿಂದೇಟು ಹಾಕುತ್ತಿದ್ದಾರೆ, ಹೆಚ್ಚಿನವರು ಸ್ವಂತ ವಾಹನಗಳಲ್ಲಿ ಓಡಾಡಬೇಕಾಗಿದೆ. ಪೆಟ್ರೋಲ್‌ನ ಮೂಲಬೆಲೆಗಿಂತ ಅದರ ಮೇಲೆ ವಿಧಿಸುವ ತೆರಿಗೆಯೇ ಜಾಸ್ತಿ ಇದೆ. ಈ ಹೊರೆ ಇಳಿಸಲು ಸರ್ಕಾರ ಮುಂದಾಗಬೇಕು. ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು.

ರಾಜು ಬಿ. ಲಕ್ಕಂಪುರ,ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT