ADVERTISEMENT

ಜೇನಿಗಷ್ಟೇ ಹೊಡೆತವಲ್ಲ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 10 ಡಿಸೆಂಬರ್ 2020, 19:31 IST
Last Updated 10 ಡಿಸೆಂಬರ್ 2020, 19:31 IST

ಜೇನು ಸಂತತಿ ನಾಶವಾಗುತ್ತಿರುವ ಬಗ್ಗೆ ಮಹೇಶ್ವರ ಹುರುಕಡ್ಲಿ ಅವರು ಹೇಳಿರುವುದು (ವಾ.ವಾ., ಡಿ. 10) ಅರ್ಥಪೂರ್ಣವಾಗಿದೆ. ಜೇನು ಸಂತತಿಯ ನಾಶದಿಂದ ಪರಾಗಸ್ಪರ್ಶ ನಡೆಯುವುದಾದರೂ ಹೇಗೆ? ಹಲವು ಪ್ರಭೇದದ ದುಂಬಿಗಳು ನಮ್ಮ ಅರಿವಿಗೇ ಬಾರದಂತೆ ನಮ್ಮ ಆಹಾರ ಉತ್ಪಾದನೆಗಾಗಿ ನಿರಂತರವಾಗಿ ದುಡಿಯುತ್ತಿವೆ. ಕೃಷಿಯಲ್ಲಿ ಬಳಸುತ್ತಿರುವ ಕ್ರಿಮಿನಾಶಕ, ಕಳೆನಾಶಕ, ರಾಸಾಯನಿಕ ಗೊಬ್ಬರಗಳು ದುಂಬಿಗಳ ಮಾರಣಹೋಮಕ್ಕೂ ಕಾರಣವಾಗಿವೆ. ರಾಸಾಯನಿಕಮುಕ್ತ ಸಹಜ ಕೃಷಿ ಪದ್ಧತಿ ಮಾತ್ರ ಜೇನು ಸಂತತಿಯನ್ನು ಉಳಿಸಬಲ್ಲದು.

- ಡಿ.ಜಿ.ಮಂಜುನಾಥ,ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT