ADVERTISEMENT

ರಾತ್ರಿ ರೈಲು– ಮತ್ತೆ ಪ್ರಾರಂಭವಾಗಲಿ

​ಪ್ರಜಾವಾಣಿ ವಾರ್ತೆ
Published 26 ಮೇ 2019, 20:00 IST
Last Updated 26 ಮೇ 2019, 20:00 IST

ಮೈಸೂರಿನಿಂದ ಶಿವಮೊಗ್ಗಕ್ಕೆ ರಾತ್ರಿ ವೇಳೆ ಸಂಚರಿಸುತ್ತಿದ್ದ ರೈಲು ಪ್ರಯಾಣವನ್ನು ಕಳೆದ ಆರೇಳು ತಿಂಗಳುಗಳಿಂದ ರದ್ದುಪಡಿಸಲಾಗಿದೆ. ಬದಲಾಗಿ, ಬೆಂಗಳೂರು ಮೂಲಕ ಪ್ರಯಾಣಿಸುವಂತೆ ಮಾಡಲಾಗಿದೆ. ಇದು ಅವೈಜ್ಞಾನಿಕ ಹಾಗೂ ತೀರಾ ಕೆಟ್ಟ ನಿರ್ಧಾರ. ಮೈಸೂರು– ಶಿವಮೊಗ್ಗಕ್ಕೆ ರಾತ್ರಿ ವೇಳೆಯ ರೈಲು ಸಂಚಾರಕ್ಕೆ ಬಹಳ ದಿನದ ಬೇಡಿಕೆ ಇತ್ತು. ಹೀಗಾಗಿ ರೈಲ್ವೆ ಇಲಾಖೆಯು ಒಂದು ಬೋಗಿಗೆ ಮೈಸೂರು– ಧಾರವಾಡ ರೈಲಿನ ಮೂಲಕ ಅರಸೀಕೆರೆವರೆಗೂ ಸಂಪರ್ಕ ಕಲ್ಪಿಸಿ, ಅಲ್ಲಿಂದ ಮುಂದೆ ಬೆಂಗಳೂರು– ಶಿವಮೊಗ್ಗ ರೈಲಿಗೆ ಈ ಬೋಗಿಯನ್ನು ಸೇರಿಸುವ ವ್ಯವಸ್ಥೆ ಮಾಡಿತ್ತು.

ಈಗ ಈ ವ್ಯವಸ್ಥೆಗೆ ತಿಲಾಂಜಲಿ ಇಟ್ಟಿರುವುದರಿಂದ, ಪ್ರಯಾಣದ ಅವಧಿ ಹೆಚ್ಚು ಜೊತೆಗೆ ಪ್ರಯಾಣ ದರ ಕೂಡ ದುಪ್ಪಟ್ಟಾಗಿದೆ. ಹೀಗಾಗಿ ಈ ಮೊದಲಿನ ವ್ಯವಸ್ಥೆಯನ್ನು ಪುನರಾರಂಭಿಸಬೇಕು ಅಥವಾ ರಾತ್ರಿ ವೇಳೆ ಶಿವಮೊಗ್ಗಕ್ಕೆ ಪ್ರತ್ಯೇಕ ರೈಲು ಓಡಿಸಬೇಕು. ಇದರಿಂದ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ.

-ಸಿಹಿಮೊಗೆ ರಮೇಶ್‌, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.