ADVERTISEMENT

ವಿದೇಶ ಪ್ರವಾಸ ಸಾಕು, ದೇಸಿ ಪ್ರವಾಸ ಬೇಕು

​ಪ್ರಜಾವಾಣಿ ವಾರ್ತೆ
Published 31 ಮೇ 2019, 18:24 IST
Last Updated 31 ಮೇ 2019, 18:24 IST

ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಸರ್ಕಾರದ ಮಂತ್ರ ಕೇವಲ ಮಾತಾಗದೆ ಕ್ರಿಯೆಗೆ ಇಳಿಯಬೇಕು. ದೇಶದ ಜನ ಯಾವುದೋ ಒಂದು ನಂಬಿಕೆ, ವಿಶ್ವಾಸದ ಮೇರೆಗೆ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದ್ದಾರೆ.

ಈ ಮೂಲಕ ಇನ್ನಷ್ಟು ಹೆಚ್ಚಿನ ಜವಾಬ್ದಾರಿ ಮೋದಿಯವರ ಬೆನ್ನಿಗೆ ಬಿದ್ದಿದೆ. ಅವರ ಕಳೆದ ಅಧಿಕಾರದ ಅವಧಿಯಲ್ಲಿ ಭಾರತ ವಿಶ್ವಮಟ್ಟದಲ್ಲಿ ಹೆಚ್ಚು ಗುರುತಿಸಿಕೊಳ್ಳುವಂತೆ ಆಗಿದ್ದು ಹೆಮ್ಮೆಯ ವಿಚಾರ.

ನಮ್ಮ ದೊಡ್ಡ ದೊಡ್ಡ ನಗರಗಳಲ್ಲಿ ಪ್ರಗತಿ ಸಾಮಾನ್ಯ. ಆದರೆ ಮೊದಲು ಪ್ರಗತಿ ಕಾಣಬೇಕಿರುವುದು ಹಳ್ಳಿಗಳು. ಮೋದಿಯವರು ವಿದೇಶ ಪ್ರವಾಸವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿ, ದೇಸಿ ಪ್ರವಾಸ ಕೈಗೊಂಡು ಹಳ್ಳಿಗಳನ್ನು ಉದ್ಧರಿಸುವ ಕಡೆಗೆ ಆಲೋಚಿಸಬೇಕು. ಜಾರಿಗೆ ತಂದಿರುವ ಯೋಜನೆಗಳು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದಿವೆ ಎಂಬುದನ್ನು ಪ್ರತ್ಯಕ್ಷವಾಗಿ ಪರಿಶೀಲಿಸಬೇಕು. ಹಳ್ಳಿಯ ಜನರ ಆರೋಗ್ಯ, ಶಿಕ್ಷಣ, ಯುವಜನರಿಗೆ ಉದ್ಯೋಗಾವಕಾಶದ ಕಡೆಗೆ ಗಮನ ನೀಡಬೇಕು. ಇದರಿಂದ, ಯುವಜನರು ಉದ್ಯೋಗ ಹುಡುಕಿಕೊಂಡು ಪಟ್ಟಣದ ಕಡೆ ಹೊರಡುವುದನ್ನು ತಡೆಯಬಹುದು.

ADVERTISEMENT

-ಸನ್ಮತಿ ಆಶಿಹಾಳ್, ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.