ADVERTISEMENT

ಪಯಣಿಸಿದ ಹಡಗನ್ನು ನಿಂದಿಸುವುದು ಸರಿಯೇ?

​ಪ್ರಜಾವಾಣಿ ವಾರ್ತೆ
Published 30 ಮೇ 2019, 19:00 IST
Last Updated 30 ಮೇ 2019, 19:00 IST

ಕಾಂಗ್ರೆಸ್‌ ಪಕ್ಷದ ಅನೇಕ ಹಿರಿಯ ನಾಯಕರು ಈಗ ಪಕ್ಷವನ್ನು ತೊರೆದಿದ್ದಾರೆ. ಇನ್ನೂ ಅನೇಕರು ಸದ್ಯದಲ್ಲೇ ಪಕ್ಷವನ್ನು ಬಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಹಲವರು ಪಕ್ಷದಲ್ಲಿ ಉನ್ನತ ಸ್ಥಾನಗಳನ್ನು ಹೊಂದಿದ್ದವರು.

ತುರ್ತು ಪರಿಸ್ಥಿತಿಯಂತಹ ಕರಾಳ ದಿನಗಳಲ್ಲಿ ಆ ಪಕ್ಷದೊಂದಿಗೆ ಇದ್ದವರು. ತಮ್ಮ ಕರಾಳ ಕೆಲಸಗಳಿಂದ ಆ ಪಕ್ಷ ಸೋಲಲು ಕಾರಣರಾದವರು. ಹಡಗು ಮುಳುಗುವಾಗ ಇಲಿ, ಹೆಗ್ಗಣಗಳು ಮೊದಲು ತಪ್ಪಿಸಿಕೊಳ್ಳುತ್ತವಂತೆ. ಈಗ ಕಾಂಗ್ರೆಸ್‌ ಪಕ್ಷ ಒಂದು ಮುಳುಗುವ ಹಡಗಿನಂತೆ ಕಾಣುತ್ತಿದೆ.

ಇವರೆಲ್ಲ, ಹಡಗು ಮುಳುಗುವಾಗ ಸುರಕ್ಷಿತವಾಗಿ ದಡ ಸೇರುವುದು ಜಾಣತನ ಎಂದುಕೊಂಡಿರಬಹುದು. ತಮಗಾಗಿ ಅಥವಾ ತಮ್ಮ ಮಕ್ಕಳಿಗಾಗಿ ಈಗಾಗಲೇ ಕೆಲವರು ಇನ್ನೊಂದು ಹಡಗು ಏರಿದ್ದಾರೆ. ಆದರೆ ಇಷ್ಟು ವರ್ಷ ತಮ್ಮನ್ನು ತೇಲಿಸಿದ ಹಡಗನ್ನು ನಿಂದಿಸುವುದು ಸರಿಯಲ್ಲ.

ADVERTISEMENT

-ಪ್ರೊ. ಶಶಿಧರ್‌ ಪಾಟೀಲ್‌,ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.