ADVERTISEMENT

ವಿವಿಪ್ಯಾಟ್‌ ತಾಳೆ: ಆಯೋಗದ ನಡೆ ಅಸಮಂಜಸ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:59 IST
Last Updated 24 ಸೆಪ್ಟೆಂಬರ್ 2019, 19:59 IST

ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ವಿರೋಧ ಪಕ್ಷಗಳು ಕಡೇಪಕ್ಷ ಶೇ 50ರಷ್ಟು ವಿ‌ವಿಪ್ಯಾಟ್ ರಸೀದಿಗಳನ್ನಾದರೂ ತಾಳೆ ಮಾಡಬೇಕೆಂದು ಚುನಾವಣಾ ಆಯೋಗವನ್ನು ಕೇಳಿಕೊಂಡಿದ್ದವು.

ಆಗ ಆಯೋಗವು ಚುನಾವಣಾ ವೇಳಾಪಟ್ಟಿ ಈಗಾಗಲೇ ಘೋಷಣೆ ಆಗಿರುವುದರಿಂದ ವೇಳಾಪಟ್ಟಿಯ ಮಿತಿಯೊಳಗೆ ಅಷ್ಟೊಂದು ದೊಡ್ಡ ಸಂಖ್ಯೆಯ ವಿ‌ವಿಪ್ಯಾಟ್‌ಗಳ ರಸೀದಿಗಳನ್ನು ತಾಳೆ ಹಾಕಲು ಸಾಧ್ಯವಿಲ್ಲ ಎಂದು ಸಬೂಬು ಹೇಳಿತ್ತು. ಈಗ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ ಚುನಾವಣೆ ಘೋಷಣೆಯಾಗಿದೆ. ಉಳಿದ ರಾಜ್ಯಗಳಲ್ಲಿಯ ಉಪಚುನಾವಣೆಗಳಿಗೆ ವೇಳಾಪಟ್ಟಿ ಘೋಷಣೆ ಆಗಿದೆ.

ಆದರೆ ಆಯೋಗವು ಶೇ 50ರಷ್ಟು ವಿ‌ವಿಪ್ಯಾಟ್‌ಗಳನ್ನಾದರೂ ತಾಳೆ ಹಾಕಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ಮತ್ತೊಮ್ಮೆ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ವಿಷಾದಕರ. ಚುನಾವಣಾ ವೇಳಾಪಟ್ಟಿ ಘೋಷಣೆಗೆ ಮುಂಚೆಯೇ ಇಂತಹ ಬೇಡಿಕೆಯನ್ನು ಇಟ್ಟಿದ್ದರೂ ಆಯೋಗ ಮನ್ನಣೆ ಕೊಡದಿರುವುದು ಪ್ರಜಾತಂತ್ರದ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ.

ADVERTISEMENT

-ಕೆ.ಲಕ್ಷ್ಮೀಕಾಂತ್ ರಾವ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.