ADVERTISEMENT

‌ರಾಜಕಾರಣಿಗಳೂ ನಗುವಂತಾಗಿದೆ!

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 19:55 IST
Last Updated 4 ಮಾರ್ಚ್ 2020, 19:55 IST

ಧರ್ಮದರ್ಶನ, ಮಾರ್ಗದರ್ಶನ, ಸನ್ನಡತೆ, ಸದಾಚಾರದ ಪಾಠ ಮಾಡಬೇಕಾದ ಮಠಗಳು, ಸ್ವಾಮಿಗಳು– ಕಾವಿಧಾರಿಗಳ ಕಾದಾಟದ ಕೇಂದ್ರಗಳಾಗುತ್ತಿವೆ. ಭಕ್ತರ ಬಣಗಳನ್ನು ಹಿಂದಿಟ್ಟುಕೊಂಡು ಕೆಲವರು ಗದ್ದುಗೆಗಾಗಿ ಗುದ್ದಾಡುತ್ತಿದ್ದಾರೆ.

ಇದನ್ನೆಲ್ಲ ನೋಡಿ ರಾಜಕಾರಣಿಗಳೂ ನಗುವಂತಾಗಿದೆ! ಇಂಥವರಿಂದ ಧರ್ಮ, ಸಂಸ್ಕೃತಿ ರಕ್ಷಣೆ ಸಾಧ್ಯವೇ? ‘ಮಠಗಳು ಸಂಸ್ಕೃತಿ ಉಳಿಸುವ ಕೇಂದ್ರಗಳು’ ಎಂದು ಸ್ವಾಮೀಜಿಯೊಬ್ಬರು ಹೇಳಿರುವ ಕಾರಣ ಇವು ಕಣ್ಣು ಮುಂದೆ ಹಾದುಹೋದವು.
-ಪ್ರೊ.ಆರ್‌.ವಿ. ಹೊರಡಿ,ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT