ADVERTISEMENT

ಮಕ್ಕಳು ಅಕ್ಷರ ದಾಸರಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಅಕ್ಟೋಬರ್ 2020, 19:31 IST
Last Updated 12 ಅಕ್ಟೋಬರ್ 2020, 19:31 IST

ಶಿಕ್ಷಣ ಇಲಾಖೆಯು ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿಸಿದ ವಿಷಯ ತಿಳಿದು ಆಘಾತವಾಯಿತು
(ಪ್ರ.ವಾ., ಅ. 11). ಕೊರೊನಾ ಕಾರಣದಿಂದ ಹೆಚ್ಚಿಗೆ ಹೊರಗೆ ಹೋಗಲಾಗದೆ ಮನೆಯಲ್ಲೇ ಕುಳಿತಿರುವ ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಅಡ್ಡ‍‍‍‍‍ಪರಿಣಾಮಗಳಿಗೆ ಆಸ್ಪದ ನೀಡಿದಂತೆಯೂ ಆಗಬಹುದು. ವಿದ್ಯಾಗಮದಂತಹ ಯೋಜನೆಗಳಿಗೆ ಮಾನಸಿಕ ತಜ್ಞರು ಪರೋಕ್ಷವಾಗಿ ಹಸಿರು ನಿಶಾನೆ ತೋರಿದ್ದರು. ಇದರಿಂದ ಮಕ್ಕಳನ್ನು ಮೊಬೈಲ್ ಚಟ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿಯಿಂದ ತಾತ್ಕಾಲಿಕವಾಗಿ ರಕ್ಷಿಸುವುದು ಸಾಧ್ಯವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಅಕ್ಷರ ದಾಸರನ್ನಾಗಿ ಮಾಡುವುದು ಇಂದಿನ ತುರ್ತಾಗಿತ್ತು.

34 ಮಕ್ಕಳಿಗೆ ಕೊರೊನಾ ಸೋಂಕು ಹರಡಿದೆಯೆಂಬ ಕಾರಣಕ್ಕೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಗಣನೆಗೆ ತೆಗೆದುಕೊಳ್ಳದಿರುವುದು ಸರಿಯಲ್ಲ. ವಿದ್ಯಾಗಮ ಯೋಜನೆಯ ಕಾರಣಕ್ಕೇ ಸೋಂಕು ಹೆಚ್ಚಾಯಿತು ಎಂಬುದು ನಿಜವೇ ಆಗಿದ್ದರೆ, ಸಾರ್ವಜನಿಕರ ಜೊತೆಗೆ ಸಂಪರ್ಕ ಹೊಂದಿರುವ ಇತರ ಸರ್ಕಾರಿ ನೌಕರರನ್ನೂ ಕೆಲಸದಿಂದ ಮುಕ್ತಗೊಳಿಸಿ, ರಜೆ ನೀಡಬೇಕು. ಈ ಕ್ರಮದಿಂದ ಈ ಸಿಬ್ಬಂದಿಯ ಕುಟುಂಬದವರು ನೆಮ್ಮದಿಯಿಂದ ಜೀವನ ನಡೆಸಲು ಅನುಕೂಲವಾಗುತ್ತದೆ.

- ಚಿ.ಉಮಾಶಂಕರ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.