ADVERTISEMENT

ವಾಚಕರ ವಾಣಿ | ಬಹುತ್ವ ಭಾರತದ ಶಿಕ್ಷಣ ಬೇಕು

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 19:30 IST
Last Updated 29 ಜುಲೈ 2020, 19:30 IST

ವಿಶ್ವದ ಕೆಲವು ದೇಶಗಳಲ್ಲಿ ಒಂದೇ ಧರ್ಮ ಮತ್ತು ಆ ಧರ್ಮದ ಸಂಸ್ಕೃತಿ ಹಾಸುಹೊಕ್ಕಾಗಿದೆ. ಆದರೆ ಭಾರತವು ಹತ್ತು ಹಲವು ಸಂಸ್ಕೃತಿ, ಆಚಾರ ವಿಚಾರ, ವಿವಿಧ ಧರ್ಮ, ಭಾಷೆ ಮತ್ತು ವೈವಿಧ್ಯಗಳಿಂದ ಕೂಡಿದ ವಿಶಿಷ್ಟ ದೇಶ. ಆ ಕಾರಣದಿಂದಲೇ ಭಾರತವನ್ನು ಬಹುತ್ವದ ರಾಷ್ಟ್ರ ಎಂದು ಕರೆಯಲಾಗುತ್ತದೆ. ಇದಕ್ಕೆ ಅನೇಕ ಮಹನೀಯರು ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್‌ ಚೇತನಗಳ ಪರಿಚಯ ಹಾಗೂ ಸಾಧನೆಯನ್ನು ಇಂದಿನ ಮಕ್ಕಳಿಗೆ ಪರಿಚಯಿಸುವುದು ಅಗತ್ಯ. ಇಂತಹ ಇತಿಹಾಸಪುರುಷರಾದ ರಾಯಣ್ಣ, ಹೈದರಾಲಿ, ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ ಅವರ ಬಗೆಗಿನ ಹಾಗೂ ಸಂವಿಧಾನಕ್ಕೆ ಸಂಬಂಧಿಸಿದ ವಿಚಾರಗಳನ್ನು‌ ನಮ್ಮ ವಿದ್ಯಾರ್ಥಿಗಳೂ ತಿಳಿಯುವುದು ಅತ್ಯಗತ್ಯ. ಆದರೆ, ಪಠ್ಯ ಕಡಿತದ ನೆಪದಲ್ಲಿ ಸರ್ಕಾರ ಈ ವಿಷಯಗಳನ್ನು ಕೈಬಿಡಲು ನಿರ್ಧರಿಸಿರುವುದು (ಪ್ರ.ವಾ., ಜುಲೈ 29) ವಿಷಾದನೀಯ. ಈ ನಿರ್ಧಾರವನ್ನು ಸಂಬಂಧಿಸಿದವರು ಪುನರ್ ಪರಿಶೀಲನೆಗೆ ಒಳಪಡಿಸಬೇಕು.⇒

-ಆರ್.ಕುಮಾರ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT