ADVERTISEMENT

ವಾಚಕರ ವಾಣಿ | ಮಾನವೀಯತೆ ಸಾಯದಿರಲಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 19:30 IST
Last Updated 31 ಜುಲೈ 2020, 19:30 IST

ಕೊರೊನಾ ಸೋಂಕಿನ ನೆಪದಲ್ಲಿ ಮಾನವೀಯತೆ ಕಣ್ಮರೆಯಾಗುತ್ತಿರುವಂತೆ ಭಾಸವಾಗುತ್ತಿದೆ. ಕೊರೊನಾಕ್ಕೆ ಮುಂಚಿತವಾಗಿಯೂ ಸಾವು ಎಂಬ ನೆಂಟ ಇದ್ದ, ಮುಂದೆಯೂ ಇರುತ್ತಾನೆ. ಆದರೆ ಈಗೀಗ ಮನುಷ್ಯರು ಯಾವ ಕಾರಣದಿಂದ ಸತ್ತರೂ ಕೊರೊನಾ ಲೇಬಲ್ ಹಚ್ಚಲಾಗುತ್ತಿದೆ.

ಸತ್ತವರ ಮನೆ ಮಂದಿಯನ್ನು ಕೀಳಾಗಿ ಕಾಣುವ ಅಮಾನವೀಯ ಮುಖಗಳ ಅನಾವರಣ ಆಗುತ್ತಿದೆ. ಸತ್ತವರು ಹೋದರೂ ಇದ್ದವರನ್ನು ಮಾನಸಿಕವಾಗಿ, ದೈಹಿಕವಾಗಿ ಶೋಷಿಸುವ ಇಂತಹ ಸಂಕುಚಿತ ಮನಸ್ಸುಗಳು ಬದಲಾಗಲಿ. ಸಾವಿನ ಜೊತೆಯಲ್ಲಿ ಮಾನವೀಯತೆಯೂ ಸಾಯದಿರಲಿ.

ಸಂತೆಬೆನ್ನೂರು ಫೈಜ್ನಟ್ರಾಜ್,ಸಂತೆಬೆನ್ನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.