ADVERTISEMENT

ವಾಚಕರ ವಾಣಿ: ವೈದ್ಯರ ನೇಮಕಾತಿ; ಅಂಗವಿಕಲರ ನಿರ್ಲಕ್ಷ್ಯ ಸಲ್ಲ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 19:30 IST
Last Updated 26 ಏಪ್ರಿಲ್ 2021, 19:30 IST

ಕೋವಿಡ್ ನಿಯಂತ್ರಣಕ್ಕಾಗಿ ಹೆಚ್ಚಿನ ವೈದ್ಯರ ಅವಶ್ಯಕತೆ ಎದುರಾಗಿರುವುದರಿಂದ, ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು (ಬಿಬಿಎಂಪಿ) 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕಾತಿ ಮಾಡಿಕೊಳ್ಳುತ್ತಿದೆ.

ಆದರೆ ಈ ನೇಮಕಾತಿಯಲ್ಲಿ ಅಂಗವಿಕಲರಿಗೆ ಯಾವುದೇ ಮೀಸಲಾತಿ ಕಲ್ಪಿಸಿಲ್ಲ. ಅಂಗವಿಕಲ ವೈದ್ಯರು ನಿರ್ವಹಿಸುವಂತಹ ಕಾರ್ಯಗಳಲ್ಲಿ ಸಾಮಾನ್ಯ ವೈದ್ಯರನ್ನು ನೇಮಕ ಮಾಡಿ, ಅರ್ಹ ಅಂಗವಿಕಲ ವೈದ್ಯರನ್ನು ವಂಚಿಸಿರುವುದು ಅಂಗವಿಕಲರ ಹಕ್ಕುಗಳ ಕಾಯ್ದೆ– 2016ರ ಸ್ಪಷ್ಟ ಉಲ್ಲಂಘನೆಯಾಗಿದೆ.

ಅಂಗವಿಕಲ ವೈದ್ಯರು ಫೀವರ್‌ ಕ್ಲಿನಿಕ್‌ಗಳು ಮತ್ತು ಕೋವಿಡ್‌ ವಾರ್‌ರೂಮ್‌ಗಳಲ್ಲಿ ನಿರಾಯಾಸವಾಗಿ ಕರ್ತವ್ಯ ನಿರ್ವಹಿಸಬಲ್ಲರು. ಅಲ್ಲದೆ ಅಂಗವೈಕಲ್ಯದ ಪ್ರಮಾಣ ಕಡಿಮೆ ಇರುವ ವೈದ್ಯರು ಸಾಮಾನ್ಯ ವೈದ್ಯರಂತೆ ಎಲ್ಲಾ ರೀತಿಯ ಕರ್ತವ್ಯಗಳನ್ನೂ ನಿರ್ವಹಿಸಬಲ್ಲರು. ಅರ್ಹ ಅಂಗವಿಕಲರಿಗೆ ಅವರ ಪದವಿಗನುಗುಣವಾಗಿ ಉದ್ಯೋಗ ಒದಗಿಸಿಕೊಡುವುದು ಸರ್ಕಾರದ ಜವಾಬ್ದಾರಿ. ಅಂಗವಿಕಲರ ಹೆಸರಿನಲ್ಲಿ ಶೇ 5ರಷ್ಟು ಉದ್ಯೋಗ ಮೀಸಲಾತಿಯನ್ನುಕಾಗದದಲ್ಲಷ್ಟೇ ಇಟ್ಟರೆ ಸಾಲದು, ಅದು ಅನುಷ್ಠಾನಕ್ಕೆ ಬರಬೇಕು.
-ಚಂದ್ರಶೇಖರ ಪುಟ್ಟಪ್ಪ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.