ADVERTISEMENT

ವಾಚಕರ ವಾಣಿ: ಮತಾಂತರ; ಕಾರಣ ಅರಿಯುವ ಕೆಲಸವಾಗಲಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 20:25 IST
Last Updated 23 ಸೆಪ್ಟೆಂಬರ್ 2021, 20:25 IST

ಮತಾಂತರ ನಿಷೇಧಕ್ಕೆ ಕಾಯ್ದೆ ತರಲು ಆಡಳಿತಗಾರರು ಚಿಂತಿಸುತ್ತಿದ್ದಾರೆ. ಕಡೆಗಣಿಸಲಾದ ಹಿಂದೂಗಳು ಮಿಕ್ಕ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ. ಬಹುಸಂಖ್ಯಾತ ಹಿಂದೂಗಳ ದೇಶದಲ್ಲೇ ‘ನಾವೆಲ್ಲಾ ಹಿಂದೂ, ನಾವೆಲ್ಲ ಒಂದು’ ಎಂದು ಪ್ರಚಾರ ಮಾಡಿದರೂ, ಈಗ ಪರ ಧರ್ಮಕ್ಕೆ ವಲಸೆ ಹೋಗುವುದಕ್ಕೆ ಹಿಂದೂ ಧರ್ಮ ಕಾರಣವೋ ಹಿಂದುತ್ವವಾದಿಗಳು ಕಾರಣರೋ ಎಂದು ಚಿಂತಿಸಿದ್ದಾರೆಯೇ?

ಹಿಂದೂಗಳಾದ ದಲಿತರನ್ನು, ಕೆಳವರ್ಗದವರನ್ನು, ವಂಚಿತರನ್ನು ಕಡೆಗಣಿಸಿ, ಅವರನ್ನು ತುಚ್ಛೀಕರಿಸಿ, ಅವರು ದೇವಾಲಯಗಳಿಗೆ ಹೋಗುವುದಕ್ಕೆ ಅಡ್ಡಿಪಡಿಸಿ, ಅವರ ಮೇಲಿನ ಅತ್ಯಾಚಾರಗಳಿಗೆ, ದಾಳಿಗಳಿಗೆ ಉತ್ತೇಜನ ಕೊಟ್ಟು, ಅವರು ಮತಾಂಧರಿಗೆ ಬಲಿಪಶುಗಳಾಗಲು ಅವಕಾಶ ಕಲ್ಪಿಸಿ, ಬಾವಿ ನೀರನ್ನು ಪಡೆಯಲೂ ಅಡ್ಡಿಪಡಿಸಿ, ಅವರ ದೈಹಿಕ ನೋವುಗಳ ಜೊತೆಗೆ, ಮಾನಸಿಕವಾಗಿ ಜೀವನ ಜರ್ಜರಿತವಾಗುವಂತೆ ಆಗುವುದರ ಹಿಂದಿನ ಕಾರಣಗಳಿಗೆ ಸ್ಪಂದಿಸದೇ ಮತಾಂತರ ನಿಷೇಧ ಕಾಯ್ದೆ ತರುವುದು ಎಷ್ಟು ವಿವೇಕಶಾಲಿ? ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದರೆ ನಿಷೇಧಿಸುತ್ತಿದ್ದರೇ?
-ಕೆ.ಎನ್.ಭಗವಾನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT