ADVERTISEMENT

ಪರೀಕ್ಷೆ: ಕುತೂಹಲದ ಪ್ರಶ್ನೆ ಇರಲಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 19:45 IST
Last Updated 28 ಫೆಬ್ರುವರಿ 2020, 19:45 IST

ಶಾಲಾ ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯ ಬಿಟ್ಟು, ಅದನ್ನು ಹಬ್ಬದಂತೆ ಸಂಭ್ರಮಿಸಬೇಕು ಎಂದು ‘ಪ್ರಜಾವಾಣಿ’ಯ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಾನಸಿಕ ತಜ್ಞ ಡಾ. ಬಿ.ವಿನಯ್‌ ಹೇಳಿದ್ದಾರೆ (ಪ್ರ.ವಾ., ಫೆ. 13). ಇಂತಹ ಭಯಕ್ಕೆ ಮುಖ್ಯ ಕಾರಣ, ಪರೀಕ್ಷೆಯು ಕಲಿಕಾ ಪರೀಕ್ಷೆಯಾಗದೆ ಸ್ಪರ್ಧಾತ್ಮಕ ಪರೀಕ್ಷೆಯಾಗಿ ಪರಿವರ್ತನೆಗೊಂಡಿರುವುದು. ಪೋಷಕರಿಗೆ ಇದು ‘ಅಹಂ’ ಪರೀಕ್ಷೆಯಾದರೆ, ಶಿಕ್ಷಕರಿಗೆ ‘ಸಾಧನೆ’ಯ ಪರೀಕ್ಷೆ ಹಾಗೂ ವಿದ್ಯಾರ್ಥಿಗಳಿಗೆ ‘ಭವಿಷ್ಯ’ದ ಪರೀಕ್ಷೆಯಾಗಿ ಮಾರ್ಪಟ್ಟಿದೆ. ಎಲ್ಲದಕ್ಕೂ ಅಂತಿಮ ಗ್ರಾಹಕರೆಂದರೆ ವಿದ್ಯಾರ್ಥಿಗಳು. ಹಾಗಾಗಿ, ಅನೇಕ ವಿದ್ಯಾರ್ಥಿಗಳಿಗೆ ಇದು ಹಬ್ಬವಾಗದೆ ಒತ್ತಡ ಎನಿಸುತ್ತದೆ. ಸಂತಸದ ಕಲಿಕೆಯನ್ನು ಕಾಣಬೇಕೆಂದರೆ, ವಿದ್ಯಾರ್ಥಿಗಳಿಗೆ ಕುತೂಹಲದ ಪ್ರಶ್ನೆಗಳನ್ನು ನೀಡುವುದು ಅವಶ್ಯ.

ಕೆ.ಪ್ರಕಾಶ್‌,ಸೀಗೋಡು, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT