ADVERTISEMENT

ಬಾಲಿಶ ವರ್ತನೆ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:45 IST
Last Updated 26 ಫೆಬ್ರುವರಿ 2020, 19:45 IST

ಪಾಕಿಸ್ತಾನದ ಪರ ಘೋಷಣೆ ಕೂಗಿ ಜೈಲು ಪಾಲಾಗಿರುವ ಕಾಶ್ಮೀರಿ ವಿದ್ಯಾರ್ಥಿಗಳ ಪರ ಜಾಮೀನು ಅರ್ಜಿ ಸಲ್ಲಿಸಲು ಧಾರವಾಡಕ್ಕೆ ಬಂದಿದ್ದ ಬೆಂಗಳೂರಿನ ಮೂವರು ವಕೀಲರ ವಿರುದ್ಧ ಸ್ಥಳೀಯ ವಕೀಲರು ಪ್ರತಿಭಟಿಸಿ, ಅವರು ಅರ್ಜಿ ಸಲ್ಲಿಸಲಾಗದೆ ವಾಪಸಾದ ಸುದ್ದಿ (ಪ್ರ.ವಾ., ಫೆ. 25) ಓದಿ ಆಶ್ಚರ್ಯವಾಯಿತು. ಜಾಮೀನು ಪಡೆಯುವುದು ನ್ಯಾಯದಾನ ಪ್ರಕ್ರಿಯೆಯ ಒಂದು ಭಾಗ. ದಿನಬೆಳಗಾದರೆ ಕೊಲೆಗಾರರು, ಅತ್ಯಾಚಾರಿಗಳು, ಕಳ್ಳರ ಪರವಾಗಿ ಇದೇ ವಕೀಲರು ಜಾಮೀನು ಅರ್ಜಿ ಗುಜರಾಯಿಸುತ್ತಾರೆ! ಹಾಗಾದರೆ ಇಂತಹ ಸಮಾಜಕಂಟಕರುಗಳೆಲ್ಲ ಅಪ್ಪಟ ದೇಶಪ್ರೇಮಿಗಳೇ? ಇಂತಹ ಅಪರಾಧಿಗಳಿಗೆಲ್ಲ ಜಾಮೀನು ಸಿಗಬಹುದಾದರೆ, ಕೇವಲ ಘೋಷಣೆ ಕೂಗಿದವರಿಗೇಕೆ ಜಾಮೀನು ಸಿಗಬಾರದು? ಜಾಮೀನು ನೀಡಿದ ಮಾತ್ರಕ್ಕೆ ವಿಚಾರಣೆ ಮುಗಿಯುವುದಿಲ್ಲ. ವಿಚಾರಣೆಯ ನಂತರ ಅವರು ತಪ್ಪಿತಸ್ಥರೆಂದು ಸಾಬೀತಾದರೆ ಶಿಕ್ಷೆಯಾಗಲಿ. ಅದು ಬಿಟ್ಟು ಹೀಗೆ ಬಾಲಿಶ ವರ್ತನೆ ತೋರುವುದು ವಕೀಲರಿಗೆ ಶೋಭೆ ತರುವುದಿಲ್ಲ.

-ಎಚ್.ಎಸ್.ನಂದಕುಮಾರ್,ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT