ADVERTISEMENT

ಚುನಾವಣಾ ಆಯೋಗ ಕಠಿಣವಾಗಿ ವರ್ತಿಸಲಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 19:11 IST
Last Updated 4 ಏಪ್ರಿಲ್ 2019, 19:11 IST

ಲೋಕಸಭಾ ಚುನಾವಣೆಯಿಂದಾಗಿ ದೇಶದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೂ ಕೆಲವೆಡೆ ನರೇಂದ್ರ ಮೋದಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಇತರ ನಾಯಕರ ಭಾವಚಿತ್ರವಿರುವ ಸೀರೆ, ಟಿ- ಶರ್ಟ್‍ಗಳು ಮಾರುಕಟ್ಟೆಗೆ ಬಂದಿವೆ. ಮತ್ತೊಂದು ಕಡೆ, ಮೋದಿಯವರ ಭಾವಚಿತ್ರದ ಲೋಗೊವುಳ್ಳಕಂಟೆಂಟ್‌ ಟಿವಿ (ನಮೋ ಟಿವಿ) ವಾಹಿನಿ ಆರಂಭವಾಗಿದೆ. ಮೋದಿ ಕುರಿತ ಚಲನಚಿತ್ರ ಬೇರೆ ಇದೆ.

ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ವ್ಯಕ್ತಿಗಳ ಕುರಿತಾಗಿ ಇಂತಹ ಚಿತ್ರ ಬಿಡುಗಡೆ, ವಾಹಿನಿಗಳ ಆರಂಭಕ್ಕೆ ಚುನಾವಣಾ ಆಯೋಗ ನಿರ್ಬಂಧ ಹೇರುವುದು ಒಳ್ಳೆಯದು. ಆಡಳಿತಾರೂಢರು ನೀತಿ ಸಂಹಿತೆ ಉಲ್ಲಂಘಿಸಿದರೆ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಅಂತಹ ಕಾರ್ಯಗಳಿಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಮಾದರಿ ನೀತಿ ಸಂಹಿತೆಗೆ ಅರ್ಥ ಇರುವುದಿಲ್ಲ.

-ಸಂದೀಪ ಚಿಕ್ಕಮಲ್ಲನಹೊಳೆ, ಜಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.